ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಎಟಿ ಸದಸ್ಯರಾಗಿ ನಿವೃತ್ತ ಪೊಲೀಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೇಮಕ

ಬೆಂಗಳೂರು: ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ಸದಸ್ಯರಾಗಿ ನಿವೃತ್ತ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್​ ನೇಮಕ ಮಾಡಿದ್ದು, ಕೇಂದ್ರ ಸರ್ಕಾರದ ನೇಮಕಾತಿ ಆದೇಶಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್​ ಅಂಕಿತ ಹಾಕಿದ್ದಾರೆ.

ನಿವೃತ್ತ ಐಎಎಸ್​ ಅಧಿಕಾರಿ ಬದಲು ಮೊದಲ ಬಾರಿಗೆ ಐಪಿಎಸ್​ ಅಧಿಕಾರಿ ನೇಮಕ ಮಾಡಿದ್ದು, ಮುಂದಿನ 4 ವರ್ಷಗಳ ಕೆಎಟಿ ಸದಸ್ಯರಾಗಿರಲಿರುವ ರಾಘವೇಂದ್ರ ಔರಾದ್ಕರ್​ ಕಾರ್ಯನಿರ್ವಹಿಸಲಿದ್ದಾರೆ. ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದು ಕೊರತೆ ನಿವಾರಣೆ ಹಾಗೂ ಪಿಂಚಣಿ ಸಚಿವಾಲಯ ರಾಷ್ಟ್ರಪತಿಗಳ ಆದೇಶದಂತೆ ರಾಘವೇಂದ್ರ ಔರಾದ್ಕರ್​ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ರಾಘವೇಂದ್ರ ಔರಾದ್ಕರ್ ಅವರ ಅವಧಿ ನಾಲ್ಕು ವರ್ಷದ್ದಾಗಿರುತ್ತದೆ. ಹಿರಿಯ ಐಪಿಎಸ್ ಅಧಿಕಾರಿಯಾಗಿ ನಿವೃತ್ತಿ ಹೊಂದಿದ್ದ ಇವರು ಪೊಲೀಸ್ ಇಲಾಖೆಯಲ್ಲಿ ಉತ್ತಮ ಅಧಿಕಾರಿ ಎನ್ನುವ ಪ್ರಶಂಸೆಗೆ ಪಾತ್ರರಾಗಿದ್ದರು. ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆ ಸೇರಿದಂತೆ ಪ್ರಮುಖ ಹುದ್ದೆಗಳನ್ನು ಪೊಲೀಸ್ ಇಲಾಖೆಯಲ್ಲಿ ನಿಭಾಯಿಸಿದ್ದರು.

Edited By : Vijay Kumar
PublicNext

PublicNext

11/06/2022 11:14 am

Cinque Terre

69.43 K

Cinque Terre

1

ಸಂಬಂಧಿತ ಸುದ್ದಿ