ಲಕ್ನೋ : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಸದ್ಯ ರಾಮ ಮಂದಿರ’ ಪ್ರದೇಶದಲ್ಲಿನ ಎಲ್ಲ ಮದ್ಯದಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ಉತ್ತರ ಪ್ರದೇಶದ ಅಬಕಾರಿ ಖಾತೆ ಸಚಿವ ನಿತಿನ್ ಅಗರವಾಲ್ ತಿಳಿಸಿದರು.
1968ರ ಅಬಕಾರಿ ಅಂಗಡಿಗಳ ನಿಯಮಗಳಲ್ಲಿ ಮಾಡಲಾದ ತಿದ್ದುಪಡಿಗಳ ಸ್ಥಿತಿಗತಿ ಕುರಿತು ಮಾಹಿತಿ ಕೋರಿದ ಬಹುಜನ ಸಮಾಜ ಪಕ್ಷದ ಸದಸ್ಯ ಭೀಮರಾವ್ ಅಂಬೇಡ್ಕರ್ ಅವರ ಪ್ರಶ್ನೆಗೆ ಅಗರವಾಲ್ ಪ್ರತಿಕ್ರಿಯಿಸಿದರು. ಈ ವೇಳೆ ಅವರು ಅಯೋಧ್ಯೆಯ ‘ಶ್ರೀರಾಮ ಮಂದಿರ’ ಪ್ರದೇಶದಲ್ಲಿ ಇರುವ ಎಲ್ಲ ಮದ್ಯದಂಗಡಿಗಳ ಪರವಾನಗಿಯನ್ನು ರದ್ದು ಮಾಡಲಾಗಿದೆ ಎಂದು ಘೋಷಿಸಿದರು.
ದೇವಾಲಯದ ಗರ್ಭಗುಡಿಯು 2024ರ ಜನವರಿಯ ಮಕರ ಸಂಕ್ರಾಂತಿಯ ಒಳಗಡೆ ಸಿದ್ಧವಾಗಲಿದೆ. ಅಲ್ಲಿ ಭಗವಾನ್ ರಾಮನ ವಿಗ್ರಹವನ್ನು ಇರಿಸಲಾಗುತ್ತದೆ ಮತ್ತು ಜನರು ಪ್ರಾರ್ಥನೆ ವಿಶೇಷ ಸ್ಥಳವನ್ನು ನಿಗದಿಪಡಿಸಲಾಗುತ್ತೆ ಎಂದು ಹೇಳಿದ್ದಾರೆ.
PublicNext
01/06/2022 05:16 pm