ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಸ್‌ನಲ್ಲಿ‌ ಮಕ್ಕಳ ಅಳತೆ ಮಾಡಿ ಟಿಕೆಟ್ ನೀಡಿ- ವಿಚಿತ್ರ ಆದೇಶ ನೀಡಿದ ಕೆಎಸ್‌ಆರ್‌ಟಿಸಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ 6 ವರ್ಷದವರೆಗಿನ ಮಕ್ಕಳಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಇದೆ. ಕೆಲವು ಬಸ್‌ಗಳಲ್ಲಿ ಮೂರು ವರ್ಷದ ಮಕ್ಕಳಿಗೂ ಟಿಕೆಟ್ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಸ್ಪಷ್ಟನೆ ನೀಡಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೆಎಸ್‌ಆರ್‌ಟಿಸಿ ಸಂಸ್ಥೆಯು, ಆರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ದರ ನಿಗದಿ ಮಾಡಲಾಗುತ್ತದೆ. ಆದರೆ ಮೂರು ವರ್ಷದ ಮಕ್ಕಳಿಗೆ ಯಾವುದೇ ಪ್ರಯಾಣ ದರ ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

ಇನ್ನೂ ಮಕ್ಕಳಿಗೆ ಪ್ರಯಾಣ ದರ ವಿಧಿಸುವಾಗ 6 ವರ್ಷದ ಒಳಗಿನ ಮಕ್ಕಳಿಗೆ ಉಚಿತ ಪ್ರಯಾಣ, 6-12 ವರ್ಷದ ಒಳಗಿನ ಮಕ್ಕಳಿಗೆ ಅರ್ಧ ಪ್ರಯಾಣ ದರ ಹಾಗೂ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಪೂರ್ಣ ದರ ವಿಧಿಸಲಾಗುತ್ತಿದೆ. ಕೆಲವೊಂದು ಸಂದರ್ಭಗಳಲ್ಲಿ 4-5 ವರ್ಷದ ಮಕ್ಕಳು 6 ವರ್ಷದ ಮೇಲ್ಪಟ್ಟವರಂತೆ ಕಾಣುತ್ತಾರೆ. ಹಾಗೇ 6-12 ವರ್ಷದ ಮಕ್ಕಳು 13 ವರ್ಷದ ಮಕ್ಕಳಂತೆ ಕಾಣುತ್ತಾರೆ. ಅಂತಹ ಸಂದರ್ಭದಲ್ಲಿ‌ ಪೋಷಕರು ಹಾಗೂ ಬಸ್ ನಿರ್ವಾಹಕರ ನಡುವೆ ವಾಗ್ವಾದ ನಡೆದಿದೆ. ಇದನ್ನು ತಪ್ಪಿಸುವ ಸಲುವಾಗಿ ಅಂತಹ ಸಮಯದಲ್ಲಿ ಮಕ್ಕಳನ್ನು ಎತ್ತರ ಅಳತೆ ಮಾಡಬೇಕು. ಪೋಷಕರ ಹಾಗೂ ಬಸ್ ಕಂಡಕ್ಟರ್ ಈ ಕೆಲಸ ಮಾಡಬೇಕು ಎಂದು ಕೆಎಸ್‌ಆರ್‌ಟಿಸಿ ಸೂಚನೆ ನೀಡಿದೆ.

Edited By : Vijay Kumar
PublicNext

PublicNext

17/05/2022 09:17 pm

Cinque Terre

45.65 K

Cinque Terre

2

ಸಂಬಂಧಿತ ಸುದ್ದಿ