ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋಧಿ ರಫ್ತು ನಿಷೇಧಿಸಿದ ಭಾರತ

ಹೊಸದಿಲ್ಲಿ: ದೇಶದಲ್ಲಿ ಗೋಧಿ ಬೆಲೆ ಏರಿಕೆಯನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಭಾರತವು ತಕ್ಷಣವೇ ಜಾರಿಗೆ ಬರುವಂತೆ ಗೋಧಿ ರಫ್ತುಗಳನ್ನು ನಿಷೇಧಿಸಿದೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. "ಗೋಧಿಯ ರಫ್ತು ನೀತಿಯನ್ನು ತಕ್ಷಣವೇ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ" ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (ಡಿಜಿಎಫ್ಟಿ) ಮೇ 13 ರ ಅಧಿಸೂಚನೆಯಲ್ಲಿ ತಿಳಿಸಿದೆ.

ಭಾರತ ಸರಕಾರವು ಇತರ ದೇಶಗಳಿಗೆ ಅವುಗಳ ಆಹಾರ ಭದ್ರತೆ ಅಗತ್ಯತೆಗಳನ್ನು ಪೂರೈಸಲು ಮತ್ತು ಆಯಾ ಸರಕಾರಗಳ ಕೋರಿಕೆಯ ಆಧಾರದ ಮೇಲೆ ನೀಡುವ ಅನುಮತಿಯ ಮೇರೆಗೆ ಗೋಧಿ ರಫ್ತುಗಳನ್ನು ಅನುಮತಿಸಲಾಗುವುದು ಎಂದು ಅದು ಸ್ಪಷ್ಟಪಡಿಸಿದೆ.

ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ಬಹುತೇಕ ದೇಶಗಳಲ್ಲಿ ಬಿಸಿಗಾಳಿಯ ಕಾರಣದಿಂದಾಗಿ ಗೋಧಿ ಇಳುವರಿ ಕುಂಠಿತಗೊಂಡಿದೆ. ಸುತ್ತಮುತ್ತಲ ದೇಶಗಳಂತೆ ಭಾರತ ಸರ್ಕಾರವೂ ಗೋಧಿ ರಫ್ತಿಗೆ ನಿರ್ಬಂಧ ಹೇರಿದೆ.

ದೇಶದ ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಏರುತ್ತಿರುವ ಆಹಾರ ಬೆಲೆಗಳನ್ನು ನಿಯಂತ್ರಿಸಲೇಬೇಕಾದ ಒತ್ತಡವನ್ನು ಕೇಂದ್ರ ಸರ್ಕಾರ ಎದುರಿಸುತ್ತಿದೆ.‘ಪ್ರಸ್ತುತ ಇಡೀ ಜಗತ್ತು ಗೋಧಿ ಕೊರತೆಯಿಂದ ಬಳಲುತ್ತಿದೆ. ಭಾರತದ ರೈತರು ಜಗತ್ತಿಗೆ ಆಹಾರ ಕೊಡಲು ಮುಂದೆ ಬಂದಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಜರ್ಮನಿ ಪ್ರವಾಸದ ವೇಳೆ ಹೇಳಿಕೆ ನೀಡಿದ್ದರು.

‘ಜಗತ್ತಿನಲ್ಲಿ ಮಾನವೀಯ ಬಿಕ್ಕಟ್ಟು ಎದುರಾದಾಗಲೆಲ್ಲ ಭಾರತವು ಪರಿಹಾರ ಒದಗಿಸಿದೆ’ ಎಂದು ಮೋದಿ ಹೇಳಿದ್ದರು. ರಷ್ಯಾ-ಉಕ್ರೇನ್ ಸಂಘರ್ಷದಿಂದ ಗೋಧಿ ವಹಿವಾಟಿನ ಮೇಲೆ ಪರಿಣಾಮ ಬೀರಿದೆ.

Edited By : Nirmala Aralikatti
PublicNext

PublicNext

14/05/2022 11:12 am

Cinque Terre

33.13 K

Cinque Terre

4

ಸಂಬಂಧಿತ ಸುದ್ದಿ