ನವದೆಹಲಿ: ಭಾರತದ ಚುನಾವಣಾ ಮುಖ್ಯ ಆಯುಕ್ತರ ಆಯ್ಕೆ ಆಗಿದೆ. ರಾಜೀವ್ ಕುಮಾರ್ ನೇಮಕ ಮಾಡಿ ಗುರುವಾರವೇ ಆದೇಶ ಹೊರಡಿಸಲಾಗಿದೆ.
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿಯೇ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಈ ಸ್ಥಾನದಲ್ಲಿ ಸುಶೀಲ್ ಚಂದ್ರ ಇದ್ದಾರೆ. ಇವರ ಅವಧಿ ಮೇ 14 ರಂದು ಕೊನೆಗೊಳ್ಳಲಿದೆ.
ಮೇ 15 ರಂದು ಭಾರತದ ಚುನಾವಣಾ ಮುಖ್ಯ ಆಯುಕ್ತರಾಗಿ ರಾಜೀವ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಅಂತಲೂ ಸಚಿವರು ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.
PublicNext
12/05/2022 07:29 pm