ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ 2020ರಲ್ಲಿ ಕೆ ಎಎಸ್ ಅಧಿಕಾರಿ ಡಾ. ಸುಧಾ ಮನೆ ಮೇಲೆ ಎಸಿಬಿ ದಾಳಿ ನಡೆಸಿತ್ತು. ದಾಳಿ ಬಳಿಕ ನೂರಾರು ಕೋಟಿ ಆಸ್ತಿ ಕೆ.ಜಿ ಕೆ.ಜಿ ಚಿನ್ನಾಭರಣ ಸುಧಾಮನೆಯಲ್ಲಿ ಪತ್ತೆಯಾಗಿತ್ತು ಈ ಹಿನ್ನೆಲೆಯಲ್ಲಿ ಸುಧಾ ಮೇಲೆ ಎಸಿಬಿ ಯಲ್ಲಿ ದೂರು ಕೂಡ ದಾಖಲಾಗಿದೆ.
ಈಮಧ್ಯೆ ಸುಧಾ ತಮ್ಮ ಶಕ್ತಿ ಬಳಸಿ ಮತ್ತೆ ಧಾರವಾಡದ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿ ನೇಮಕವಾಗಿದ್ರು. ಇನ್ನು ಸುಧಾ ನೇಮಕಾತಿಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅಪಸ್ವರ ಕೇಳಿ ಬಂದಿತ್ತು. ಈ ಹಿನ್ನೆಲೆ ಸರ್ಕಾರ ಸರ್ಕಾರ ಡಾ. ಸುಧಾರವರ ಆದೇಶವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
PublicNext
07/05/2022 05:49 pm