ಶಿವಮೊಗ್ಗ: ಬೆಳಗಾವಿ ಜಿಲ್ಲೆಯ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದೆ. ಇದರಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರವು ಮಹತ್ವದ ಆದೇಶವನ್ನು ನೀಡಿದೆ.
ಈ ಸಂಬಂಧ ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇನ್ಮುಂದೆ ಮೌಖಿಕ ಆದೇಶದ ಮೇಲೆ ಯಾರೂ ಕಾಮಗಾರಿ ಮಾಡುವಂತಿಲ್ಲ ಎಂದು ಆದೇಶ ನೀಡಿದ್ದಾರೆ.
'ಲೋಕಲ್ ಬಾಂಡೀಸ್‌ನಲ್ಲಿ, ಪಂಚಾಯತ್ ರಾಜ್ ಬಾಂಡೀಸ್‌ನಲ್ಲೂ ಮೌಖಿಕ ಆದೇಶದ ಮೇಲೆ ಕೆಲಸಗಳು ನಡೆಯುತ್ತವೆ. ಆದರೆ ನಾನು ಈಗಾಗಲೇ ಪ್ರತಿ ಡಿಪಾರ್ಟ್ಮೆಂಟ್‌ಗೆ ಸೂಚನೆ ನೀಡಿದ್ದೇನೆ. ಯಾವುದೇ ಮೌಖಿಕ ಆದೇಶದ ಮೇಲೆ ಕೆಲಸದ ಕಾಮಗಾರಿ ಮಾಡಬಾರದು. ಒಂದು ವೇಳೆ ಮಾಡಿದರೆ, ಆ ಪ್ರಕ್ರಿಯೆಗೆ ಇಂಜಿನಿಯರ್ ಜವಾಬ್ದಾರಿಯಾಗುತ್ತಾರೆ. ಇನ್ನು ಗ್ರಾಮೀಣ ಭಾಗದಲ್ಲಿ ಪಿಡಿಒ ಮತ್ತು ಇಓ ಜವಾವ್ದಾರಿಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ಮುಂದೆ ಸ್ಪಷ್ಟವಾದ ರೈಟಿಂಗ್‌ನಲ್ಲಿಯೇ ಆದೇಶ ನೀಡಬೇಕಾಗುತ್ತದೆ. ಕಾಮಗಾರಿ ಟೆಂಡರ್ ಸಂಬಂಧ ನಿವೃತ್ತ ಜಡ್ಜ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸುತ್ತಿದ್ದಾರೆ. ಇನ್ನೊಂದು ವಾರದಲ್ಲೇ ಈ ಆದೇಶ ಕೂಡ ಹೊರ ಬೀಳಲಿದೆ ಎಂದು ತಿಳಿಸಿದರು.
PublicNext
20/04/2022 04:59 pm