ಹೊಸದಿಲ್ಲಿ: ಯುಗಾದಿ ಹಬ್ಬಕ್ಕೆ ಕೇಂದ್ರ ಸರ್ಕಾರ ತುಟ್ಟಿ ಭತ್ಯೆ ಹೆಚ್ಚಿಸುವ ಮೂಲಕ ಸರ್ಕಾರಿ ನೌಕರರಿಗೆ ಗಿಫ್ಟ್ ಕೊಟ್ಟಿದೆ. ಹೌದು ಕೇಂದ್ರ ಸರ್ಕಾರಿ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಶೇ 3ರಷ್ಟು ಹೆಚ್ಚಿಸುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಶೇ 3ರಷ್ಟು ಏರಿಕೆಯಿಂದ ಶೇ 31ರಷ್ಟಿದ್ದ ತುಟ್ಟಿಭತ್ಯೆ ಅಥವಾ ಡಿಎ, ಶೇ 34 ಕ್ಕೆ ತಲುಪಿದೆ. ಈ ಡಿಎ ಹೆಚ್ಚಳವು 2022 ರ ಜನವರಿ 1ರಿಂದಲೇ ಅನ್ವಯವಾಗುವಂತೆ ಜಾರಿಯಾಗಲಿದೆ.
ಹೀಗಾಗಿ ಈ ವರ್ಷದ ಮೊದಲ ಮೂರು ತಿಂಗಳಿನ ಅರಿಯರ್ಸ್ ಕೂಡ ಕೇಂದ್ರ ಸರ್ಕಾರದ ಸಿಬ್ಬಂದಿ ಹಾಗೂ ಪಿಂಚಣಿದಾರರಿಗೆ ಲಭ್ಯವಾಗಲಿದೆ. ಕೇಂದ್ರದ ಈ ನಿರ್ಧಾರದಿಂದ 50 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಹಾಗೂ 65 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.
PublicNext
30/03/2022 04:42 pm