ಬೆಂಗಳೂರು: ನ್ಯಾ.ಎನ್ ಆನಂದ್ ಅವರ ನಿವೃತ್ತಿಯಿಂದ ತೆರವಾಗಿದ್ದ ಕರ್ನಾಟಕದ ಉಪ ಲೋಕಾಯುಕ್ತ ಹುದ್ದೆಗೆ ನ್ಯಾ. ಕೆಎನ್ ಫಣೀಂದ್ರ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಈ ಕುರಿತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಲೋಕಾಯುಕ್ತದಲ್ಲಿ ಓರ್ವ ಲೋಕಾಯುಕ್ತ ಮತ್ತು ಇಬ್ಬರು ಉಪ ಲೋಕಾಯುಕ್ತರ ಹುದ್ದೆಗಳಿವೆ. ಉಪ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಎನ್.ಆನಂದ ಅವರು ಐದು ವರ್ಷಗಳ ಸೇವಾವಧಿ ಪೂರ್ಣಗೊಳಿಸಿ 2020ರ ಡಿಸೆಂಬರ್‌ನಲ್ಲಿ ನಿವೃತ್ತರಾಗಿದ್ದರು.
ಆನಂದ್ ಅವರ ನಿವೃತ್ತಿಯಿಂದ ಉಪ ಲೋಕಾಯುಕ್ತ ಹುದ್ದೆ ಖಾಲಿ ಆಗಿತ್ತು. ಅವರ ನಿವೃತ್ತಿ ಬಳಿಕ ಒಂದೂವರೆ ವರ್ಷವಾದರೂ ಉಪಲೋಕಾಯುಕ್ತರ ನೇಮಕ ಆಗಿರಲಿಲ್ಲ. ಇದೀಗ ಅವರ ಜಾಗಕ್ಕೆ ನ್ಯಾ. ಕೆಎನ್ ಫಣೀಂದ್ರ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
PublicNext
23/03/2022 08:37 pm