ನವದೆಹಲಿ: ಉಕ್ರೇನ್ ಹೆಸರು ಕೇಳಿದರೆ ಎಲ್ಲರೂ ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಭಾರತದಿಂದ ಉಕ್ರೇನ್‌ಗೆ ವೈದ್ಯರಾಗುವ ಮಹತ್ತರ ಕನಸು ಕಟ್ಟಿಕೊಂಡು ಹೋಗಿದ್ದ ವಿದ್ಯಾರ್ಥಿಗಳು ಉಕ್ರೇನ್ ಹೆಸರು ಕೇಳಿದರೆ ಕನಸಿನಲ್ಲೂ ಬೆಚ್ಚಿ ಬೀಳುತ್ತಿದ್ದಾರೆ. ಇದಕ್ಕೆ ಕಾರಣ ಆ ವಿದ್ಯಾರ್ಥಿಗಳಿಗೆ ಅಲ್ಲಿ ಆದ ಭೀಭತ್ಸ ಅನುಭವ. ಹೀಗೆ ಮಗನನ್ನು ಸುರಕ್ಷಿತವಾಗಿ ತವರಿಗೆ ಕರೆದುಕೊಂಡು ಬಂದ ಸರ್ಕಾರಕ್ಕೆ ಕಾಶ್ಮೀರ ಮೂಲದ ಸಂಜಯ್ ಪಂಡಿತ ಎಂಬುವರು ಧನ್ಯವಾದ ತಿಳಿಸಿದ್ದಾರೆ.
ಉಕ್ರೇನ್ನಿಂದ ಮರಳಿದ್ದು, ನನ್ನ ಮಗನಲ್ಲ ಪ್ರಧಾನಿ ನರೇಂದ್ರ ಮೋದಿ ಅವರ ಮಗನೆಂದು ಹೇಳಲು ಬಯಸುತ್ತೇನೆ ಎಂದು ಸಂಜಯ್ ಇದೇ ಸಂದರ್ಭದಲ್ಲಿ ಭಾವುಕ ಮಾತುಗಳನ್ನಾಡಿದರು.
ದೆಹಲಿ ವಿಮಾನ ನಿಲ್ದಾಣದಲ್ಲಿ ಮಗನನ್ನು ಬರಮಾಡಿಕೊಂಡ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಂಜಯ್ ಪಂಡಿತ ಅವರು, 'ಉಕ್ರೇನ್ನ ಸುಮಿಯ ಸ್ಥಿತಿಯನ್ನು ನೋಡಿ ನಾವು ಭರವಸೆ ಕಳೆದುಕೊಂಡಿದ್ದೆವು. ಇಂತಹ ಸಂದಿಗ್ಧ ಸಮಯದಲ್ಲಿ ನನ್ನ ಮಗನನ್ನು ಸುರಕ್ಷಿತವಾಗಿ ತವರಿಗೆ ಕರೆತಂದಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ' ಎಂದು ಹೇಳಿದರು.
PublicNext
12/03/2022 10:49 pm