ತಿರುವನಂತಪುರ: ಮಹಿಳಾ ದಿನಾಚರಣೆ ಅಂಗವಾಗಿಯೇ ಕೇರಳದ ಕೆಎಸ್‌ಆರ್‌ಟಿಸಿ ಮಹಿಳೆಯರಿಗಾಗಿಯೇ ವಿಶೇಷ ಪ್ರವಾಸ ಪ್ಲಾನ್ ಮಾಡಿದೆ.ಮಾರ್ಚ್-8 ರಿಂದ 13 ವರೆಗೂ ಮಹಿಳಾ ಪ್ರವಾಸದ ವಾರವನ್ನ ಆಚರಿಸುತ್ತಿದೆ.
ನವ ಕೇರಳ ಮಿಷನ್ ಸಂಯೋಜಕ ಟಿ.ಎನ್.ಸೀಮಾ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ಪ್ರವಾಸದಲ್ಲಿ ಕೇರಳದ ಮುನ್ರೋ ದ್ವೀಪ್,ಸಾಂಬ್ರಾಣಿಕೋಡಿ ಮತ್ತು ತಿರುಮುಲ್ಲವರಂ ಬೀಚ್ ಪ್ರವಾಸ ಇರುತ್ತದೆ.
ನಿಮ್ಸ್ ಮೆಡಿಸಿಟಿಯ ಮಹಿಳಾ ಉದ್ಯೋಗಿಗಳಿಗೆ ಈ ಪ್ರವಾಸ ಕೈಗೊಳ್ಳಲಾಗಿದ್ದು ಕೆಎಸ್‌ಆರ್‌ಟಿಸಿಯ ಈ ಬಜೆಟ್ ಪ್ರವಾಸದಲ್ಲಿ 100 ಮಹಿಳೆಯರಿಗೆ ಅವಕಾಶ ಇದೆ. ಸುರಕ್ಷಿತ ಮತ್ತು ಆರಾಮದಾಯ ಪ್ರವಾಸ ಇದಾಗಿದೆ ಅಂತಲೇ ಪ್ರಕಟಣೆ ತಿಳಿಸಿದೆ.
PublicNext
08/03/2022 07:46 am