ನವದೆಹಲಿ: ಇನ್ಮುಂದೆ ವಾಹನಗಳಿಗೂ ಫಿಟ್‌ನೆಸ್ ಸರ್ಟಿಫಿಕೆಟ್ ಕಡ್ಡಾಯ ಗೊಳ್ಳುತ್ತದೆ. ಹೌದು! ಈ ಸಂಬಂಧ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊರಡಿಸಿರೋ ಅಧಿಸೂಚನೆ ಸದ್ಯಕ್ಕೆ ಕರಡು ರೂಪದಲ್ಲಿಯೇ ಇದೆ. ಅತೀ ಶೀಘ್ರದಲ್ಲಿಯೇ ಇದು ಜಾರಿ ಕೂಡ ಗೊಳ್ಳಲಿದೆ.
ಅಂದ್ಹಾಗೆ ನಂಬರ್ ಪ್ಲೇಟ್ ಇರೋ ಹಾಗೇನೆ ಆಯಾ ವಾಹನಗಳ ಮೇಲೆ ಫಿಟ್‌ನೆಸ್ ಸರ್ಟಿಫಿಕೆಟ್ ಅಳವಡಿಕೆ ಕಡ್ಡಾಯಗೊಳ್ಳುತ್ತದೆ. 10 ವರ್ಷಕಿಂತಲೂ ಹಳೆ ಡಿಸೈಲ್ ವಾಹನ ಮತ್ತು 15 ವರ್ಷಕಿಂತಲೂ ಹಳೆಯದಾದ ವಾಹನಗಳಿದ್ದರೆ ಅಂತಹ ವಾಹನಗಳಿಗೆ ಫಿಟ್‌ನೆಸ್ ಸರ್ಟಿಫಿಕೆಟ್ ಕಡ್ಡಾಯವಾಗಲಿದೆ.
ಕೇಂದ್ರ ಸಾರಿಗೆ ಸಚಿವಾಲಯದ ಪ್ರಕಾರ, 17 ಲಕ್ಷದಷ್ಟು ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು 15 ವರ್ಷಗಳಿಗಿಂತಲೂ ಹಳೆಯದ್ದಾಗಿವೆ.ಫಿಟ್‌ನೆಸ್ ಸರ್ಟಿಫಿಕೆಟ್ ಇಲ್ಲದೇ ಓಡಾಡುತ್ತಿವೆ. ಕರಡು ರೂಪದಲ್ಲಿರೋ ನಿಯಮ ಜಾರಿ ಆದ್ಮೇಲೆ ಇಂತಹ ವಾಹನಗಳು ರದ್ದುಗೊಳ್ಳಿವೆ.
PublicNext
03/03/2022 07:47 pm