ತಿರುವನಂತಪುರ:ಸ್ಟೂಡೆಂಟ್ ಪೊಲೀಸ್ ಕೆಡೆಟ್ (ಎಸ್‌ಪಿಸಿ) ಇಲ್ಲೂ ಕೂಡ ಹಿಜಾಬ್ (ಮುಖದ ಸ್ಕಾರ್ಪ್) ಹಾಗೂ ಉದ್ದನೆ ತೋಳಿನ ಉಡುಗೆ ಧರಿಸಲು ಅವಕಾಶ ಕೊಡಿ ಅಂತಲೇ ವಿದ್ಯಾರ್ಥಿನಿಯೊಬ್ಬರು ಅರ್ಜಿ ಸಲ್ಲಿಸಿದ್ದರ. ಆದರೆ ಕೇರಳ ಸರ್ಕಾರ ಈಗ ಇದನ್ನ ತಳ್ಳಿ ಹಾಕಿದೆ.
ಸ್ಟೂಡೆಂಟ್ ಪೊಲೀಸ್ ಕೆಡೆಟ್ ಅನ್ನೋದು ಒಂದು ಶಾಲಾ-ಕಾಲೇಜು ಮಟ್ಟದಲ್ಲಿಯೇ ಶಿಸ್ತು ಕಲಿಸೋ ವಿಧಾನ. ಇಲ್ಲಿ ಎಲ್ಲರಿಗೂ ಒಂದೇ ರೀತಿಯ ಸಮವಸ್ತ್ರಗಳು ಇರುತ್ತವೆ. ಜಾತಿ-ಮತ-ಭೇದ ಅಂತ ಇಲ್ಲಿ ಏನೂ ಇರೋದಿಲ್ಲ.
ಒಂದು ವೇಳೆ ಎಸ್‌ಪಿಸಿಯ ಸಮವಸ್ತ್ರದಿಂದ ತೊಂದರೆ ಆಗೋದೇ ಆದರೆ,ಅಂತಹ ವಿದ್ಯಾರ್ಥಿನಿಯರು ಸ್ಟೂಡೆಂಟ್ ಪೊಲೀಸ್ ಕೆಡೆಟ್ ಸೇರಲೇಬಾರದು ಅಂತಲೇ ಸರ್ಕಾರ ಈಗ ಹೇಳಿ ಬಿಟ್ಟಿದೆ.
PublicNext
28/01/2022 12:48 pm