ಬೆಂಗಳೂರು: ರಾಜ್ಯದಲ್ಲಿ 19 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ಸರಕಾರ ಆದೇಶ ಹೊರಡಿಸಿದಿದೆ. ಕರ್ನಾಟಕ ಲೋಕ ಸೇವಾ ಆಯೋಗದ ಪರೀಕ್ಷಾ ನಿಯಂತ್ರಕ ಹುದ್ದೆಯಲ್ಲಿ ಪ್ರಭಾರ ಅಧಿಕಾರಿಯಾಗಿದ್ದ ಎಂ. ಕನಗವಲ್ಲಿ ಅವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗೆ ಕಲಬುರ್ಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿರುವ ನಳಿನ್ ಅತುಲ್ ಅವರನ್ನು ನಿಯೋಜಿಸಲಾಗಿದೆ.
ವರ್ಗಾವಣೆಯಾದವರು ಹಾಗೂ ನಿಯೋಜಿಸಲಾದ ಹುದ್ದೆಗಳು
ಅನಿಲ್‌ಕುಮಾರ್ ಬಿ.ಎಚ್.– ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ
ಎಂ. ಕನಗವಲ್ಲಿ– ಆಯುಕ್ತರು, ಆಹಾರ ಇಲಾಖೆ -
ವಿ. ವಿ. ಜೋತ್ಸ್ನಾ– ವ್ಯವಸ್ಥಾಪಕ ನಿರ್ದೇಶಕಿ, ರೇಷ್ಮೆ ಕೈಗಾರಿಕಾ ನಿಗಮ
ಯಶವಂತ ಗುರುಕರ್– ಜಿಲ್ಲಾಧಿಕಾರಿ, ಕಲಬುರ್ಗಿ
ಶಮ್ಲಾ ಇಕ್ಬಾಲ್– ಕಾರ್ಯದರ್ಶಿ, ಸಾರ್ವಜನಿಕ ಉದ್ದಿಮೆಗಳ ಇಲಾಖೆ
ಹೆಪ್ಸಿಬಾ ರಾಣಿ ಕೊರ್ಲಪಾಟಿ– ವ್ಯವಸ್ಥಾಪಕ ನಿರ್ದೇಶಕಿ, ಕರ್ನಾಟಕ ವಿದ್ಯುತ್ ಕಾರ್ಖಾನೆ
ಕೆ.ಎ. ದಯಾನಂದ– ಆಯುಕ್ತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಜಗದೀಶ ಜಿ– ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
ಕೆ.ಎಸ್. ಲತಾಕುಮಾರಿ– ನಿರ್ದೇಶಕಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ
ವೆಂಕಟ್ ರಾಜ – ಜಿಲ್ಲಾಧಿಕಾರಿ, ಕೋಲಾರ
ಗರಿಮಾ ಪವಾರ್– ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಯಾದಗಿರಿ
ಶಿಲ್ಪಾ ನಾಗ್– ಆಯುಕ್ತರು, ಗ್ರಾಮೀಣಾಭಿವೃದ್ಧಿ ಇಲಾಖೆ
ಎನ್.ಎಂ. ನಾಗರಾಜ– ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ವೈದ್ಯಕೀಯ ಸಾಮಗ್ರಿಗಳ ಪೂರೈಕೆ ನಿಗಮ
ಶೇಖ್ ತನ್ವೀರ್ ಆಸಿಫ್– ಹೆಚ್ಚುವರಿ ಆಯುಕ್ತ, ಅಬಕಾರಿ ಇಲಾಖೆ
ಭುವನೇಶ ದೇವಿದಾಸ ಪಾಟೀಲ– ವ್ಯವಸ್ಥಾಪಕ ನಿರ್ದೇಶಕ, ಈಶಾನ್ಯ ಸಾರಿಗೆ ನಿಗಮ
ಶಿಲ್ಪಾ ಶರ್ಮ– ಆಯುಕ್ತರು, ಪಂಚಾಯತ್‌ರಾಜ್ ಇಲಾಖೆ
ಲಿಂಗಮೂರ್ತಿ ಜಿ– ಕಾರ್ಯದರ್ಶಿ, ರಾಜ್ಯ ಚುನಾವಾಣಾ ಆಯೋಗ
ಇಬ್ರಾಹಿಂ ಮೈಗೂರ– ಕಾರ್ಯದರ್ಶಿ, ರೇರಾ
PublicNext
25/01/2022 05:40 pm