ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

26 ಮಂದಿಗೆ ಐಪಿಎಸ್ ಬಡ್ತಿ

ಬೆಂಗಳೂರು: ಹಣ ವಸೂಲಿ ಆರೋಪ ಹೊತ್ತ ಮಧುರಾ ವೀಣಾ ಸೇರಿದಂತೆ ಕರ್ನಾಟಕ ರಾಜ್ಯ ಪೊಲೀಸ್ ಸೇವೆಯ (ಕೆಎಸ್ ಪಿಎಸ್) 26 ಅಧಿಕಾರಿಗಳನ್ನು ಭಾರತೀಯ ಪೊಲೀಸ್ ಸೇವೆಗೆ (ಐಪಿಎಸ್) ಬಡ್ತಿ ನೀಡಿ ಪ್ರೊಬೇಷನರಿಯಾಗಿ ನೇಮಕ ಮಾಡಲಾಗಿದೆ.

2016ರಲ್ಲಿ ಇವರು ಸಿಐಡಿ ಮಾನವ ಸಾಗಣೆ ನಿಗ್ರಹದ ಘಟಕದ ಎಸ್ಪಿ ಆಗಿದ್ದಾಗ ಹೋಟೆಲ್ ಮಾಲೀಕರಿಗೆ ಬೆದರಿಸಿ 2 ಲಕ್ಷ ವಸೂಲಿ ಮಾಡಿದ ಆರೋಪಕ್ಕೆ ಮಧುರಾ ವೀಣಾ ಗುರಿಯಾಗಿದ್ದರು.

ಅದೇ ರೀತಿ ಮಲ್ಲಿಕಾರ್ಜುನ ಬಾಲದಂಡಿ ಅವರನ್ನು ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.

ಬಡ್ತಿ ಪಡೆದ ಅಧಿಕಾರಿಗಳು: ಎಂ.ವಿ ಚಂದ್ರಕಾಂತ್, ಎಂ.ಎಲ್.ಮಧುರಾ ವೀಣಾ. ಚನ್ನಬಸವಣ್ಣ ಲಂಗೋಟಿ, ಜಯಪ್ರಕಾಶ್, ಕೆ.ಪಿ.ಅಂಜಲಿ, ಎಂ.ನಾರಾಯಣ, ಎಂ.ಮುತ್ತುರಾಜು, ಎಚ್.ಟಿ.ಶೇಖರ್, ರವೀಂದ್ರ ಕಾಶೀನಾಥ್ ಗಡಾದಿ, ಅನಿತಾ ಭೀಮಪ್ಪ ಹದ್ದಣ್ಣನವರ್, ಎ. ಕುಮಾರಸ್ವಾಮಿ, ಸಾರಾ ಫಾತಿಮಾ, ರಶ್ಮಿ ಪರಡ್ಡಿ, ಎಂ.ಎ.ಅಯ್ಯಪ್ಪ.

ಶಿವಕುಮಾರ್, ಮಲ್ಲಿಕಾರ್ಜುನ ಬಾಲದಂಡಿ, ವೈ.ಅಮರನಾಥ್ ರೆಡ್ಡಿ, ಪವನ್ ನೆಜ್ಜೂರು, ಬಿ.ಎಲ್.ಶ್ರೀಹರಿಬಾಬು, ಎಂ.ಎಸ್.ಗೀತಾ, ಯಶೋಧಾ ವಂಟಗೋಡಿ, ಎಂ. ರಾಜೀವ್, ವಿ.ಜೆ.ಶೋಭಾರಾಣಿ, ಡಾ.ಎಸ್.ಕೆ.ಸೌಮ್ಯಲತಾ, ಬಿ.ಟಿ. ಕವಿತಾ ಮತ್ತು ಉಮಾ ಪ್ರಶಾಂತ್ ಬಡ್ತಿ ಪಡೆದಿದ್ದಾರೆ.

Edited By : Nirmala Aralikatti
PublicNext

PublicNext

11/12/2021 07:29 am

Cinque Terre

55.03 K

Cinque Terre

0