ಉಜ್ಜಯಿನಿ:ರಾಮಾಯಣ ಎಕ್ಸ್ ಪ್ರೆಸ್ ರೈಲಿನಲ್ಲಿ ಹಿಂದು ಧರ್ಮಕ್ಕೆ ಅವಮಾನ ಆಗುತ್ತಿದೆ. ಪ್ರಯಾಣಿಕರಿಗೆ ಊಟ-ತಿಂಡಿ ಸರ್ವ್ ಮಾಡುವ ಮಾಣಿಗಳು ಸಾಧು ತರಹವೇ ಡ್ರೆಸ್ ತೊಟ್ಟು ಅವಮಾನ ಮಾಡುತ್ತಿದ್ದಾರೆ ಎಂದು ಉಜ್ಜಯಿನಿಯ ಪ್ರಯಾಣಿಕರೊಬ್ಬ ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈಲಿನಲ್ಲಿ ಸರ್ವ್ ಮಾಡುವ ಮಾಣಿಗಳು ತಲೆ ಮೇಲೆ ಪೇಟಾ ಧರಿಸುತ್ತಾರೆ. ಕೊರಳಲ್ಲಿ ರುದ್ರಾಕ್ಷಿ ಮಾಲೆ ಹಾಕಿಕೊಳ್ಳುತ್ತಾರೆ. ಒಂದು ರೀತಿ ಸಾಧುಗಳ ವೇಷಭೂಷಣವೇ ಆಗಿ ಹೋಗಿದೆ. ಈ ಬಗ್ಗೆ ಈಗಾಗಲೇ ರೈಲ್ವೆ ಸಚಿವರಿಗೂ ಪತ್ರ ಬರೆದು ತಿಳಿಸಲಾಗಿದೆ.
ಒಂದು ವೇಳೆ ಮಾಣಿಗಳ ಡ್ರೆಸ್ ಕೋಡ್ ಬದಲಾಗದೇ ಇದ್ದರೇ, ರೈಲು ಹಳಿ ಮೇಲೆ ಕುಳಿತು ರಾಮಾಯಣ ಎಕ್ಸ್ ಪ್ರೆಸ್ ರೈಲು ನಿಲ್ಲಿಸುವುದಾಗಿಯೂ ಎಚ್ಚರಿಸಿದ್ದಾರೆ ಉಜ್ಜಯಿನಿಯ ಆ ಪ್ರಯಾಣಿಕ.
PublicNext
22/11/2021 10:42 pm