ವರದಿ: ಗಣೇಶ್ ಹೆಗಡೆ
ಬೆಂಗಳೂರು: ಮಗುವನ್ನು ದತ್ತು ಪಡೆದ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿಗೆ 180 ದಿನಗಳ ಕಾಲ ರಜೆ ನೀಡಲು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಸುತ್ತೋಲೆ ಹೊರಡಿಸಿದ್ದಾರೆ.
ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 135 (ಎ)ಯ ಅವಕಾಶದಂತೆ ನಿಗಮವು ಈ ಅವಕಾಶ ನೀಡಿದೆ. ಮಗುವನ್ನು ದತ್ತು ಪಡೆದ ದಿನಾಂಕದಿಂದ 180 ದಿನಗಳ ಅವಧಿಯವರೆಗೆ ಅಥವಾ ದತ್ತು ಪಡೆದ ಮಗುವಿಗೆ ಒಂದು ವರ್ಷ ತುಂಬುವವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ರಜಾ ನಿಯಮಾವಳಿಯನ್ವಯ ಅವರ ಖಾತೆಯಲ್ಲಿರುವ ರಜೆಯನ್ನು ಹಾಗೂ ಅಗತ್ಯವಿದ್ದಲ್ಲಿ ಖಾತೆಯಲ್ಲಿಲ್ಲದ ರಜೆಯನ್ನು ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ.
ಆದರೆ ಅಂತಹ ಮಹಿಳಾ ಉದ್ಯೋಗಿಗಳು ಮಗುವನ್ನು ದತ್ತು ಪಡೆದ ಸಂದರ್ಭದಲ್ಲಿ ಎರಡು ಜೀವಂತ ಮಕ್ಕಳನ್ನು ಹೊಂದಿರಬಾರದು ಎಂದು ತಿಳಿಸಲಾಗಿದೆ. ಈ ಸುತ್ತೋಲೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಅಸಂಬದ್ಧ ಆದೇಶಗಳು ಸಾರಿಗೆ ನಿಗಮಗಳಿಂದ ಬರುತ್ತಿವೆ. ದತ್ತು ಪಡೆದ ಸಿಬ್ಬಂದಿ ಏಕೆ ಹೆರಿಗೆ ರಜೆ ಅವಶ್ಯಕತೆ ಇರುತ್ತೆ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.
PublicNext
19/11/2021 09:07 am