ಬೆಂಗಳೂರು:ಇನ್ಮುಂದೆ ನೀವೂ ಬಸ್ ಗಳಲ್ಲಿ ಲೌಡ್ ಸ್ಪೀಕರ್ ಹಾಕಿಕೊಂಡು ಮೊಬೈಲ್ ನಲ್ಲಿ ನ್ಯೂಸ್ ನೋಡುವಂತಿಲ್ಲ. ಹಾಡುಗಳನ್ನೂ ಕೇಳುವಂತೇ ಇಲ್ಲ. ಒಂದು ವೇಳೆ ಹೀಗೆ ಮಾಡಿದರೆ ಮುಗೀತು. ಟಿಕೆಟ್ ದುಡ್ಡು ಕೊಡದೇನೇ ಬಸ್ ನಿಂದ ಬಸ್ ಸಿಬ್ಬಂದಿ ಕೆಳಗಿಳಿಸಿ ಬಿಡುತ್ತಾರೆ ಜೋಕೆ.
ಹೌದು.ಕೆಎಸ್ಆರ್‌ಟಿಸಿ ಈಗ ಈ ನಿಯಮವನ್ನ ಜಾರಿಗೆ ತಂದಿದೆ.ಹೇಳ್ಬೇಕು ಅಂದ್ರೆ ಈಗಂತು ಮೊಬೈಲ್ ಕ್ರೇಜ್ ತುಂಬಾ ಇದೆ. ಬಸ್ ನಲ್ಲಿ ಕುಳಿತವ್ರು ಮೊಬೈಲ್ ಲೌಡ್ ಸ್ಪೀಕರ್ ನಲ್ಲಿ ನ್ಯೂಸ್ ನೋಡ್ತಾರೆ. ಜೋರು ಜೋರಾಗಿ ಹಾಡುಗಳನ್ನೂ ಕೇಳ್ತಾರೆ. ಇದರಿಂದ ಸಹ ಪ್ರಯಾಣಿಕರಿಗೆ ತೊಂದರೇ ಆಗುತ್ತಿದೆ.
ಇದನ್ನ ಮನಗಂಡ ಕೆಎಸ್ಆರ್‌ಟಿಸಿ ಈಗ ಹೊಸ ನಿಯಮ ಜಾರಿಗೆ ತಂದಿದೆ.ಮೊಬೈಲ್ ಲೌಡ್ ಸ್ಪೀಕರ್ ನಲ್ಲಿ ಹಾಡು ಕೇಳುವವರು ಇಲ್ಲವೇ ನ್ಯೂಸ್ ನೋಡುವವರು ಇದ್ದರೇ, ಅಂತಹವರಿಗೆ ಬಸ್ ಚಾಲನಾ ಸಿಬ್ಬಂದಿ ಒಂದು ಸಲ ವಾರ್ನಿಂಗ್ ಕೊಡಬೇಕಿದೆ.ಅಷ್ಟು ಮೀರಿ ಅವರು ಕೇಳದೇ ಇದ್ದರೆ, ಸ್ಥಳದಲ್ಲಿಯೇ ಅವರನ್ನ ಇಳಿಸಿ ಪ್ರಯಾಣದರವನ್ನೂ ಕೊಡದೇ ಕಳಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಸಾರಿಗೆ ನಿಗಮ ಆದೇಶ ಹೊರಡಿಸಿದೆ.
PublicNext
12/11/2021 05:22 pm