ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಧಿಕಾರ ದುರ್ಬಳಕೆ ಆರೋಪ‌: ಬಿಬಿಎಂಪಿ ಅಧಿಕಾರಿಗಳಿಬ್ಬರ ತಲೆದಂಡ

ಬೆಂಗಳೂರು: ಅಧಿಕಾರ ದುರ್ಬಳಕೆ ಆರೋಪದಡಿ ಪಾಲಿಕೆ ಅಧಿಕಾರಿಗಳಿಬ್ಬರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ.

ರಸ್ತೆ ಮೂಲಭೂತ ಸೌಕರ್ಯ ಕಚೇರಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಶೋಕ್ ಬಾಗಿ ಹಾಗೂ ನವೀನ್ ಮೇಲೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಶಿಸ್ತು ಕ್ರಮ ಜರುಗಿಸಿದ್ದಾರೆ.

ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಅಶೋಕ್ ಬಾಗಿ ಪಾಲಿಕೆಯ ಟಿಇಸಿ ವಿಭಾಗದಲ್ಲಿ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಹೆಚ್ಚುವರಿಯಾಗಿ ಪ್ರಭಾರ ಕಾರ್ಯಪಾಲಕ ಅಭಿಯಂತರ ಅಗಿ ಕಾರ್ಯ ನಿರ್ವಹಿಸುತ್ತಿದ್ದ ದೂರು ಕೇಳಿಬಂದಿತ್ತು.‌ ಇದೇ ವಿಭಾಗದಲ್ಲಿ ಕೆಲಸ ಪರಿವೀಕ್ಷಕರಾಗಿದ್ದ ನವೀನ್ ಟಿಇಸಿ ವಿಭಾಗದ ಸಹಾಯಕ ಅಭಿಯಂತರ ಹುದ್ದೆಯನ್ನು ವಹಿಸಿಕೊಂಡಿದ್ದರು ಎನ್ನಲಾಗಿದೆ.

ಮೂಲತಃ ಜಲಸಂಪನ್ಮೂಲ ಇಲಾಖೆಯಿಂದ ಎರವಲು ಸೇವೆಯ ಮೇಲೆ ಬಿಬಿಎಂಪಿ ಕಾರ್ಯ ನಿರ್ವಹಿಸುತ್ತಿದ್ದ ಅಶೋಕ್ ಬಾಗಿರನ್ನು ಪಾಲಿಕೆ ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ನವೀನ್‌ರನ್ನ ಶಿವಾಜಿ ನಗರ ವಾರ್ಡ್ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ಈ ಬಗ್ಗೆ ಬಿಬಿಎಂಪಿ ಮಾಜಿ ಅಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ಬಿಬಿಎಂಪಿ ಮುಖ್ಯ ಅಯುಕ್ತ ಗೌರವ್ ಗುಪ್ತಾ ಹಾಗೂ ಆಡಳಿತಾಧಿಕಾರಿ ಅವರಿಗೆ ದಾಖಲೆ ಸಹಿತ ದೂರು ನೀಡಿದ್ದರು.

Edited By : Vijay Kumar
PublicNext

PublicNext

09/11/2021 05:25 pm

Cinque Terre

15.48 K

Cinque Terre

0

ಸಂಬಂಧಿತ ಸುದ್ದಿ