ಅಂಗನವಾಡಿ ಪುನರ್ ಪ್ರಾರಂಭಿಸಲು ಸರ್ಕಾರ ಸಮ್ಮತಿ ನೀಡಿದ್ದು ಆ ಕುರಿತು ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
1. ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯು ಎರಡು ಡೋಸ್ ವ್ಯಾಕ್ಸಿನೇಷನ್ ಪಡೆದಿರಬೇಕು.
2. ಅಂಗನವಾಡಿ ಕೇಂದ್ರದ ಒಳ ಆವರಣ ಮತ್ತು ಸುತ್ತಮುತ್ತಲಿನ ಆವರಣವನ್ನು ಸ್ವಚ್ಛಗೊಳಿಸುವುದು.
3. ಅಂಗನವಾಡ ಕೇಂದ್ರದಲ್ಲಿನ ಪಾಕೋಪಕರಣ, ಮಕ್ಕಳು ಕುಳಿತುಕೊಳ್ಳಲು ಉಪಯೋಗಿಸಿದ ಜಮಾನ ಡಸ್ ಕುರ್ಚಿ ಸಾಮಾನಗಳು ಮುಲತಾದವುಗಳನ್ನು ಅಂಗನವಾಡಿ ಪ್ರಾರಂಭದ ಹಿಂದಿನ ದಿನಗಳಲ್ಲಿ ಶುಚಿಗೊಳಿಸುವುದು, ಅಂಗನವಾಡಿ ಕೇಂದ್ರದ ಕಿಟಕಿ ಬಾಗಿಲುಗಳನ್ನು ತೆರೆಯುವುದು.
4. ಶೌಚಾಲಯ, ಅಂಗನವಾಡಿಯ ನೆಲ ಗೋಡ, ಕಿಟಕಿ, ಬಾಗಿಲು ಮುಂತಾದವುಗಳನ್ನು ಸೋಪಿನ ದ್ರಾವಣದಲ್ಲಿ ಸ್ವಚ್ಛಗೊಳಿಸುವುದು.
5. ಅಂಗನವಾಡಿ ಕೇಂದ್ರದಲ್ಲಿ ಪೂರಕ ಪೌಷ್ಟಿಕ ಆಹಾರ ತಯಾರಿಸುವ ಎಲ್ಲಾ ಪಾವು ಲೋಟ / ಕುಕ್ಕರ್ ಗಳನ್ನು ಸ್ವಚ್ಚಗೊಳಿಸುವುದು.
6. ಅಂಗನವಾಡಿ ಕೇಂದ್ರದಲ್ಲಿ ನೀರು ಶೇಖರಣೆಯ ವಾಟರ್ ಫಿಲ್ಟರ್, ಟ್ಯಾಂಕ್, ಸಂಪು ಇವುಗಳಲ್ಲಿರುವ ನೀರನ್ನು ಹೊರಚೆಲ್ಲಿ ಸ್ವಚ್ಛಗೊಳಿಸುವುದು.
7, ಅಂಗನವಾಡಿ ಕೇಂದ್ರಗಳನ್ನು ತೆರೆಯುವ ಬಗ್ಗೆ ಗ್ರಾಮ ಪಂಚಾಯತಿ ಮತ್ತು ಬಾಲವಿಕಾಸ ಸಮಿತಿಯ ಸದಸ್ಯರಿಗೆ ಮಾಹಿತಿ ನೀಡುವುದು.
8, ಅಂಗನವಾಡಿ ಕೇಂದ್ರಗಳಿಗೆ ಹಾಜರಾಗಲು ಇಚ್ಛಿಸುವ ಮಕ್ಕಳ ಪೋಷಕರಿಂದ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಅಂಗನವಾಡಿ ಕಾರ್ಯಕರ್ತೆಯು ಪಡೆಯುವುದು.
9. ಅಂಗನವಾಡಿ ಕೇಂದ್ರಗಳ ಫಲಾನುಭವಿಗಳ ಎಲ್ಲಾ ಪೋಷಕರು 2 ಡೋಸ್ ಕೋವಿಡ್-19 ವ್ಯಾಕ್ಸಿನೇಷನ್ ಪಡೆದಿರಬೇಕು.
10. ಕೋಡ್ ಪಾಸಿಟಿವಿಟಿ ದರ 2% ಕ್ಕಿಂತ ಕಡಿಮೆ ಇರುವ ತಾಲೂಕುಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸುವುದು.
11. ಯಾವ ಯಾವ ಅಂಗನವಾಡಿ ಕೇಂದ್ರದ ವ್ಯಾಪ್ತಿಯಲ್ಲಿ ಪಾಸಿಟಿವ್ ದರ 2% ಕ್ಕಿಂತ ಕಡಿಮೆ ಇದ ಎನ್ನುವ ಬಗ್ಗೆ ಖಚಿತಪಡಿಸಿಕೊಳ್ಳುವುದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ.
12, ಅಂಗನವಾಡಿ ಕೇಂದ್ರವನ್ನು ಮೊದಲಿನ ಹಂತದಲ್ಲಿ ಬೆಳೆಗೆ, 10.00 ಗಂಟೆಯಿಂದ ಮಧ್ಯಾಹ್ನ : 12.00 ಗಂಟೆಯವರೆಗೆ ತೆರೆಯುವುದು. 13, ಕೋವಿಚ್ 19 ರೋಗ ಲಕ್ಷಣಗಳಾದ ಜ್ವರ, ಕೆಮ್ಮು, ನೆಗಡಿ, ಗಂಟಲು ನೋವು ಮತ್ತು ನೋವು, ಉಸಿರಾಟದ ಸಮಸ್ಯೆ ರುಚಿ ಮತ್ತು ವಾಸನೆಯನ್ನು ಕಳೆದುಕೊಳ್ಳುವ ಲಕ್ಷಣಗಳಿಂದ ಬಳಲುತ್ತಿದ್ದರೆ ಅಂತಹ ಮಗುವನ್ನು ಅಂಗನವಾಡಿ ಕೇಂದ್ರಕ್ಕೆ ಕರ ತರದಂತ ಪೋಷಕರಿಗೆ ಸೂಚಿಸುವುದು.
14. ಕಮ್ಮುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಮುಚ್ಚಿರತಕ್ಕದ್ದು ಕಮ್ಮುವಾಗ ಸೀನುವಾಗ ಮೊಣಕೈ ಅಡ್ಕ ಹಿಡಿದು ಕಮ್ಮಬೇಕು / ಸೀನಬೇಕು ಮಕ್ಕಳು ಮುಖವನ್ನು ಮುಟ್ಟಿಕೊಳ್ಳದಿರುವಂತೆ ಮತ್ತು ಕೆಮ್ಮುವಾಗ / ಸೀನುವಾಗ ಬಾಯಿ ಮತ್ತು ಮೂಗನ್ನ ಮುಚ್ಚಿಕೊಳ್ಳುವಂತೆ ತಿಳಿಸಬೇಕು.
15. ಮಗುವಿನ ಕುಟುಂಬದಲ್ಲಿ ಯಾರಾದರೂ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದರೆ, ಕೋವಿಡ್ ರೋಗಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರೆ ಅಥವಾ ರೋಗ ಲಕ್ಷಣಗಳಾದ ಜ್ವರ, ಕಮ್ಮು, ನೆಗಡಿ, ಗಂಟಲುನೋವು ಅಥವಾ ಉಸಿರಾಟದ ತೊಂದರೆಗಳಿಂದ ಬಳಲುತ್ತಿದ್ದರೆ, ಅಂತಹ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕರೆತರದಂತೆ ನೋಡಿಕೊಳ್ಳುವುದು.
16. ಅಂಗನವಾಡಿ ಕೇಂದ್ರದಲ್ಲಿ ಇರುವ ಸ್ಥಳಾವಕಾಶವನ್ನು ನೋಡಿಕೊಂಡು ಮಕ್ಕಳನ್ನು 1 ಮೀಟರ್ ಅಂತರದಲ್ಲಿ ಕೂರಿಸುವ ವ್ಯವಸ್ಥೆ ಮಾಡುವುದು ಇದರನ್ವಯ ಅಂಗನವಾಡಿಗೆ ಪ್ರತಿದಿನ ಎಷ್ಟು ಮಕ್ಕಳು ಬರಬೇಕೆಂಬ ಬಗ್ಗೆ ತೀರ್ಮಾನಿಸುವುದು.
ಮಕ್ಕಳ ಸಂಖ್ಯೆ ಹೆಚ್ಚಾಗಿದ್ದಲ್ಲಿ 2 ಅಥವಾ 3 ದಿನಕ್ಕೊಮ್ಮೆ ಬರಲು ಸೂಚಿಸುವುದು, ಮಕ್ಕಳ ಸಂಖ್ಯೆ ಕಡಿಮೆ ಇದ್ದಲ್ಲಿ ಎಲ್ಲಾ ಮಕ್ಕಳನ್ನು ಅಂಗನವಾಡಿಗೆ ಬರುವಂತೆ ತಿಳಿಸುವುದು, ಯಾವ ಯಾವ ಮಕ್ಕಳು ಅಂಗನವಾಡಿಗೆ ಬರಬೇಕೆಂಬ ಬಗ್ಗೆ, ಪೋಷಕರಿಗೆ ಮೊದಲೇ ಪೋನ್ ಮೂಲಕ ತಿಳಿಸುವುದು ಅಥವಾ ಕರೆ ತರುವುದು.
17, ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸುವ ದಿನ ಅಂಗನವಾಡಿ ಕೇಂದ್ರದಲ್ಲಿ ಹಬ್ಬದ ವಾತಾವರಣ ಇರುವಂತೆ ಕ್ರಮ ಕೈಗೊಳ್ಳುವುದು, ಅಂಗನವಾಡಿ ಕೇಂದ್ರಗಳನ್ನು ತೋರಣಗಳಿಂದ ಹೂವಿನಿಂದ ಬೆಲೂನಿನಿಂದ ಅಲಂಕರಿಸುವುದು, ಅಂಗನವಾಡಿಗೆ ಬರುವ ಪ್ರತಿ ಫಲಾನುಭವಿಗಳಿಗೆ ಗುಲಾಬಿ ಹೂವು ನೀಡಿ ಸ್ವಾಗತಿಸುವುದು, ಅಂಗನವಾಡಿ ಪ್ರಾರಂಭದ ದಿನ ಫಲಾನುಭವಿಗಳಿಗೆ ಸಿಹಿ ತಿನಿಸನ್ನು ನೀಡುವುದು, ಪ್ರಾರಂಭದ ದಿನ ಈ ಎಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗಲೂ ಸಹ ಕಡ್ಡಾಯವಾಗಿ ಕೋವಿಲ್ ಶಿಷ್ಟಾಚಾರವನ್ನು ಪಾಲಿಸುವಂತೆ ತಿಳಿಸಲಾಗಿದೆ.
18. ಅಂಗನವಾಡಿ ಕೇಂದ್ರಕ್ಕೆ ಪೋಷಕರೊಂದಿಗೆ ಮಕ್ಕಳು ಬರುವಂತೆ ಕ್ರಮ ಕೈಗೊಳ್ಳುವುದು, ಪೋಷಕರು, ಅಂಗನವಾಡಿ ಕೇಂದ್ರಕ್ಕೆ ಬಂದಾಗ ಕೋವಿಡ್ ಕಾರ್ಯವಿಧಾನದ ಬಗ್ಗೆ ವಿವರವಾಗಿ ತಿಳಿಸಲು ಕ್ರಮ ಕೈಗೊಳ್ಳುವುದು.
19. ಅಂಗನವಾಡಿ ಪ್ರಾರಂಭದ ದಿನ ಬಾಲವಿಕಾಸ ಸಮಿತಿ ಸದಸ್ಯರು, ಊರಿನ ಮುಖ್ಯಸ್ಮರು, ಪಂಚಾಯಿತಿ ಸದಸ್ಯರು ಹಾಜರಿದ್ದು ಅಂಗನವಾಡಿ ಕೇಂದ್ರಕ್ಕೆ ಫಲಾನುಭವಿಗಳನ್ನು ಸ್ವಾಗತಿಸುವುದು.
PublicNext
03/11/2021 03:25 pm