ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 9ನೇ ಕಂತನ್ನು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದ್ದಾರೆ. ಆ ಮೂಲಕ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ 2,000 ರೂಪಾಯಿ ಜಮೆಯಾಗುತ್ತಿದೆ.
ಕೇಂದ್ರ ಸರ್ಕಾರ ಸದರಿ ಯೋಜನೆ ಅಡಿಯಲ್ಲಿ ರೈತರಿಗೆ ಬಿಡುಗಡೆ ಮಾಡುತ್ತಿರುವ ಪಿಎಂ ಕಿಸಾನ್ ನಿಧಿಯ 9 ನೇ ಕಂತು ಇದಾಗಿದ್ದು, ಈ ಯೋಜನೆಯಿಂದಾಗಿ ರೈತರು ಕೇಂದ್ರದಿಂದ ಪ್ರತಿವರ್ಷ ಮೂರು ಕಂತುಗಳಲ್ಲಿ 6,000 ರೂಪಾಯಿಗಳ ಹಣಕಾಸಿನ ನೆರವು ಪಡೆಯುತ್ತಿದ್ದಾರೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನಾ ಸರ್ಕಾರದ ಯೋಜನೆಯಾಗಿದ್ದು, ಇದಕ್ಕೆ ಶೇಕಡಾ 100ರಷ್ಟು ಹಣಕಾಸು ಅನುದಾನವನ್ನು ಭಾರತ ಸರ್ಕಾರವೇ ಭರಿಸುತ್ತದೆ. 2018ನೇ ಇಸವಿಯ ಡಿಸೆಂಬರ್ 1ರಂದು ಆರಂಭಗೊಂಡ ಈ ಯೋಜನೆಯಡಿ 2 ಹೆಕ್ಟೇರ್ ತನಕ ಒಟ್ಟಾರೆಯಾಗಿ ಭೂಮಿ ಇರುವ ಅಥವಾ ಮಾಲೀಕತ್ವ ಹೊಂದಿರುವ ಸಣ್ಣ ಹಾಗೂ ಕಿರು ರೈತರ ಕುಟುಂಬಗಳಿಗೆ ವಾರ್ಷಿಕವಾಗಿ 6000 ರೂಪಾಯಿಯನ್ನು ತಲಾ 2 ಸಾವಿರ ರೂಪಾಯಿಯಂತೆ ಮೂರು ಕಂತಿನಲ್ಲಿ ಪಾವತಿಸಲಾಗುತ್ತದೆ. ಮೊತ್ತವು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಲಿದೆ.
ಈಚಿನ ಕಂತು ಬಂದಿದೆಯೇ ಎಂಬುದನ್ನು ಪರಿಶೀಲಿಸಲು ಅಧಿಕೃತ ವೆಬ್ ಸೈಟ್ www.pmkisan.gov.in ಭೇಟಿ ನೀಡಿ.
PublicNext
09/08/2021 02:04 pm