ಸಿಕ್ಕಿಂ : ಗಡಿಯಲ್ಲಿ ಗದ್ದಲ ಸಾಮಾನ್ಯ ಎನ್ನುವಂತೆ ಚೀನಾ ಒಂದಿಲ್ಲೊಂದು ರೀತಿಯಲ್ಲಿ ಕಿರಿಕ್ ಮಾಡುತ್ತಿದೆ. ಈಗಾಗಲೇ ಭಾರತ ಮತ್ತು ಚೀನಾ ನಡುವೆ ಅನೇಕ ಬಾರಿ ಮಾತುಕತೆ ನಡೆದರೂ ಚೀನಾ ತನ್ನ ನೀಚ ಬುದ್ದಿಯನ್ನು ಮುಂದುವರೆಸಿದೆ.
ಸದ್ಯ ಪೂರ್ವ ಲಡಾಖ್ ನಲ್ಲಿ LAC ಬಳಿ ಚೀನಾ ಹಾಗೂ ಭಾರತೀಯ ಯೋಧರ ನಡುವೆ ಘರ್ಷಣೆಯಾಗಿದೆ. ಚೀನಾ ಸೈನಿಕರು ಎಲ್ ಎಸಿ ಬದಲಾಯಿಸಲು ಯತ್ನಿಸಿ,ಭಾರತದ ಗಡಿ ದಾಟಲು ಯತ್ನಿಸಿದ್ದಾರೆ.ಈ ವೇಳೆ ಭಾರತೀಯ ಯೋಧರು ಅವರನ್ನು ತಡೆದಿದ್ದಾರೆ. ಉಭಯ ರಾಷ್ಟ್ರದ ಸೈನಿಕರ ನಡುವೆ ಘರ್ಷಣೆ ಸಂಭವಿಸಿದ್ದು, ಇದರಲ್ಲಿ ನಾಲ್ವರು ಭಾರತೀಯ ಹಾಗೂ 20 ಚೀನಾ ಯೋಧರು ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ.
ಮೂರು ದಿನಗಳ ಹಿಂದೆ ಸಿಕ್ಕಿಂನ ನಾಕುಲಾ ಸೆಕ್ಟರ್ ನಲ್ಲಿ ನಡೆದಿತ್ತೆಂದು ವರದಿಗಳು ಉಲ್ಲೇಖಿಸಿವೆ. ಗಡಿ ದಾಟಲು ಯತ್ನಿಸಿದ ಚೀನಾದ ಸೈನಿಕರನ್ನು ತಮ್ಮ ಕಾರ್ಯಾಚರಣೆ ಮೂಲಕ ಭಾರತೀಯ ಸೈನಿಕರು ತಡೆದಿದ್ದಾರೆ.
15-16 ಜೂನ್ ನಲ್ಲಿ ಲಡಾಖ್ ನ ಗಲ್ವಾನ್ ಕಣಿವೆಯ ಎಲ್ಎಸಿಯಲ್ಲೂ ಉಭಯ ರಾಷ್ಟ್ರದ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಇದರಲ್ಲಿ ಭಾರತೀಯ ಸೇನೆಯ ಕರ್ನಲ್ ಸೇರಿ ಇಪ್ಪತ್ತು ಯೋಧರು ಹುತಾತ್ಮರಾಗಿದ್ದರು. ಅಲ್ಲದೇ ಈ ಘರ್ಷಣೆಯಲ್ಲಿ ಭಾರತೀಯ ಸೈನಿಕರು ಚೀನಾಗೆ ತಕ್ಕ ಪಾಠ ಕಲಿಸಿದ್ದರೆನ್ನಲಾಗಿತ್ತು.
PublicNext
25/01/2021 12:53 pm