ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಸತ್ ಭವನ ನಿರ್ಮಾಣಕ್ಕೆ ಸುಪ್ರೀಂ ಅಸ್ತು

ನವದೆಹಲಿ : ನೂತನ ಸಂಸತ್ ಭವನ ನಿರ್ಮಾಣಕ್ಕೆ ನೂರೆಂಟು ವಿಘ್ನಗಳು ಎದುರಾಗಿ ಕೊನೆಗೆ ಸುಪ್ರೀಂ ಮೆಟ್ಟಿಲೇರಲಾಗಿತ್ತು.

ನಿರ್ಮಾಣಕ್ಕೆ ಅಡ್ಡಲಾಗಿದ್ದ ಎಲ್ಲ ತೊಡಕುಗಳಿಗೆ ಫುಲ್ ಸ್ಟಾಫ್ ಇಟ್ಟ ಸುಪ್ರೀಂ ಕೋರ್ಟ್ ನೂತನ ಸಂಸತ್ ಭವನ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದೆ.

ನೂತನ ಸಂಸತ್ ಭವನ ನಿರ್ಮಾಣ ಒಳಗೊಂಡಿರುವ ಸೆಂಟ್ರಲ್ ವಿಸ್ತಾ ಯೋಜನೆಗೆ ಸರ್ವೋಚ್ಚ ನ್ಯಾಯಾಲಯ ಒಪ್ಪಿಗೆ ನೀಡಿದೆ.

ಯೋಜನೆಯಿಂದ ಪರಿಸರಕ್ಕೆ ಧಕ್ಕೆಯಾಗುತ್ತದೆ ಸೇರಿದಂತೆ ಮುಂತಾದ ಆಕ್ಷೇಪಗಳನ್ನ ವ್ಯಕ್ತಪಡಿಸಿ ಸಲ್ಲಿಕೆಯಾದ ವಿವಿಧ ದೂರುಗಳ ವಿಚಾರಣೆ ನಡೆಸಿದ ಬಳಿಕ ಸುಪ್ರೀಂ ಕೋರ್ಟ್ ಈ ಬೃಹತ್ ಯೋಜನೆಗೆ ಅನುಮತಿ ಕೊಟ್ಟಿದೆ.

ನ್ಯಾಯಮೂರ್ತಿಗಳಾದ ಎ.ಎಂ. ಖನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಂಜೀವ್ ಖನ್ನಾ ಅವರಿದ್ದ ತ್ರಿಸದಸ್ಯ ಸುಪ್ರೀಂ ಪೀಠ ಇಂದು ಈ ತೀರ್ಪು ನೀಡಿದೆ.

ನವೆಂಬರ್ 5ರಂದು ನ್ಯಾಯಪೀಠ ತನ್ನ ತೀರ್ಪನ್ನ ಕಾಯ್ದಿರಿಸಿತ್ತು.

ಭವಿಷ್ಯದ ದಿನಗಳನ್ನ ಗಣನೆಯಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ ಎಂಬುದು ಕೇಂದ್ರ ಸರ್ಕಾರದ ವಾದ.

ರಾಷ್ಟ್ರಪತಿ ಭವನ ಮತ್ತು ಇಂಡಿಯಾ ಗೇಟ್ ನಡುವಿನ 3 ಎಕರೆ ಪ್ರದೇಶದಲ್ಲಿ ಸೆಂಟ್ರಲ್ ವಿಸ್ಟಾ ಯೋಜನೆ ಅಸ್ತಿತ್ವಕ್ಕೆ ಬರುತ್ತಿದೆ.

ಇಲ್ಲಿ ಹೇರಳ ಸಂಖ್ಯೆಯಲ್ಲಿ ಹಸಿರು ಇದೆ. ನವದೆಹಲಿಗೆ ಶೋಭೆ ತರುತ್ತಿದ್ದ ಗಿಡಮರಗಳು ಈ ಯೋಜನೆಯಿಂದಾಗಿ ಧರೆಗುರುಳುತ್ತವೆ ಎಂಬುದು ಈ ಯೋಜನೆಗೆ ಇರುವ ಪ್ರಮುಖ ಆಕ್ಷೇಪಗಳಾಗಿವೆ.

ಆದರೆ, ಸಂಸತ್ ಸದಸ್ಯರ ಸಂಖ್ಯೆಯ ವಿಚಾರ ಮಾತ್ರ ಅಲ್ಲ, ವಿವಿಧ ಸರ್ಕಾರಿ ಇಲಾಖೆಗಳ ಕಚೇರಿಗಳಿಗೆ ಈಗ ಕೊಡಲಾಗುತ್ತಿರುವ ಬಾಡಿಗೆ ಹಣವನ್ನು ಈ ಯೋಜನೆ ಮೂಲಕ ಉಳಿಸಬಹುದು.

ಈ ಯೋಜನೆಗೆ ಯಾವುದೇ ಕಾನೂನು ಮುರಿದಿಲ್ಲ. ಆತುರವಾಗಿ ನಿರ್ಧಾರವಾದ ಯೋಜನೆಯೂ ಇದಲ್ಲ ಎಂಬುದು ಸರ್ಕಾರದ ವಾದ.

2024ರಷ್ಟರಲ್ಲಿ ನೂತನ ಸಚಿವಾಲಯದ ಕಟ್ಟಡಗಳು ತಲೆ ಎತ್ತಲಿವೆ.

Edited By : Nirmala Aralikatti
PublicNext

PublicNext

05/01/2021 12:04 pm

Cinque Terre

60.13 K

Cinque Terre

12

ಸಂಬಂಧಿತ ಸುದ್ದಿ