ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹತ್ವದ ಮಸೂದೆ ಮಂಡಿಸಿದ ಅಸ್ಸಾಂ ಸರ್ಕಾರ : ಮದರಸಾಗಳು ಸಾಮಾನ್ಯ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತನೆ

ಗುವಾಹಟಿ: ಮುಂದಿನ ಹಣಕಾಸು ವರ್ಷದಿಂದ ಸರ್ಕಾರದ ಹಣದಲ್ಲಿ ನಡೆಸಲಾಗುತ್ತಿರುವ ಮದರಸಾಗಳನ್ನು ಸಾಮಾನ್ಯ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸುವ ಮಸೂದೆಯೊಂದನ್ನು ಅಸ್ಸಾಂನ ಬಿಜೆಪಿ ನೇತೃತ್ವದ ಮೈತ್ರಿ ಇಂದು ವಿಧಾನಸಭೆಯಲ್ಲಿ ಮಂಡಿಸಿದೆ.

ಅಸ್ಸಾಂ ಮದರಸಾ ಶಿಕ್ಷಣ (ಪ್ರಾಂತೀಕರಣ) ಕಾಯ್ದೆ, 1995 ಮತ್ತು ಅಸ್ಸಾಂ ಮದರಸಾ ಶಿಕ್ಷಣ (ನೌಕರರ ಸೇವೆಗಳ ಪ್ರಾಂತೀಕರಣ ಮತ್ತು ಮದರಸಾ ಶಿಕ್ಷಣ ಸಂಸ್ಥೆಗಳ ಮರು-ಸಂಘಟನೆ) ಕಾಯ್ದೆ, 2018 ಅನ್ನು ರದ್ದುಗೊಳಿಸುವ ಮಸೂದೆಯನ್ನು ಮಸೂದೆ 2020ನ್ನು ಮಂಡಿಸಲಾಗಿದೆ.

ಈ ಮಸೂದೆ ಮಂಡನೆ ನಂತರ ಪ್ರತಿಪಕ್ಷಗಳು ಸದನದಲ್ಲಿ ಪ್ರತಿಭಟನೆ ನಡೆಸಿದವು.

ಮದರಸಾಗಳನ್ನು ಮುಚ್ಚುವ ಅಥವಾ ಖಾಸಗಿ ಮದರಸಾಗಳನ್ನು ನಿಯಂತ್ರಿಸುವ ಯಾವುದೇ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ ಎಂದು ಹಣಕಾಸು ಸಚಿವ ಹಿಮಾಂತ್ ಬಿಸ್ವಾ ಶರ್ಮಾ ಹೇಳಿದರು.

ಮದರಸಾಗಳನ್ನು ಮಾಧ್ಯಮಿಕ, ಪ್ರೌಢ ಮತ್ತು ಹೈಯರ್ ಸೆಕೆಂಡರಿ ಶಾಲೆಗಳಾಗಿ ಪರಿವರ್ತಿಸುವ ಪ್ರಸ್ತಾವವನ್ನು ಮಸೂದೆ ಹೊಂದಿದ್ದು, ಬೋಧಕ, ಬೋಧಕೇತರ ಸಿಬ್ಬಂದಿಯ ಸ್ಥಾನಮಾನ, ವೇತನ, ಭತ್ಯೆ ಮತ್ತು ಸೇವಾ ಷರತ್ತುಗಳನ್ನು ಯಾವುದೇ ಬದಲಾವಣೆ ಮಾಡುತ್ತಿಲ್ಲ.

ಅಸ್ಸಾಂನಲ್ಲಿ ಸರ್ಕಾರದಿಂದ ನಡೆಯಲ್ಪಡುತ್ತಿರುವ ಇಂತಹ 600 ಮದರಸಾಗಳಿದ್ದು, ಅವುಗಳನ್ನು 1915ರಲ್ಲಿ ಪರಿಚಯಿಸಲಾಗಿತ್ತು.

ರಾಜ್ಯ ಸರ್ಕಾರದಿಂದ ನಡೆಯಲ್ಪಡುವ ಮದರಸಾಗಳು ಮತ್ತು ಸಂಸ್ಕೃತ ಕಲಿಕಾ ಕೇಂದ್ರಗಳ ಮೇಲೆ ಸರ್ಕಾರ ವಾರ್ಷಿಕವಾಗಿ 260 ಕೋಟಿ ವೆಚ್ಚ ಮಾಡುತ್ತಿದೆ.

ಸರ್ಕಾರದಿಂದ ನಡೆಸಲಾಗುತ್ತಿರುವ ಮದರಸಾಗಳನ್ನು ಸಾಮಾನ್ಯ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸುವ ಪ್ರಸ್ತಾಪಕ್ಕೆ ಇತ್ತೀಚಿಗೆ ರಾಜ್ಯ ಕ್ಯಾಬಿನೆಟ್ ಅನುಮೋದನೆ ನೀಡಿದ ಬಳಿಕ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಜಾತ್ಯತೀತಗೊಳಿಸಲು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವುದಾಗಿ ಬಿಸ್ವಾ ಶರ್ಮಾ ಇತ್ತೀಚಿಗೆ ಹೇಳಿಕೆ ನೀಡಿದ್ದರು.

Edited By : Nirmala Aralikatti
PublicNext

PublicNext

28/12/2020 07:22 pm

Cinque Terre

52.12 K

Cinque Terre

4

ಸಂಬಂಧಿತ ಸುದ್ದಿ