ಈಗಿನ ಮಕ್ಕಳು ತುಂಬ ಚೂಟಿ. ಸದಾ ಏನಾದರೊಂದು ಕೀಟಲೆ ಮಾಡುತ್ತಲೇ ಇರುತ್ತವೆ. ಅದು ಮನೆಯಲ್ಲಾದರೂ ಸರಿ. ಶಾಲೆಯಲ್ಲಾದರೂ ಸರಿ.
ಹೀಗೆ ಕ್ಲಾಸ್‌ನಲ್ಲಿ ಸದಾ ಕೀಟಲೆ ಮಾಡುತ್ತಿದ್ದ ಪುಟ್ಟ ಬಾಲಕನೋರ್ವ ಶಿಕ್ಷಕಿಯನ್ನು ತಬ್ಬಿಕೊಂಡು ಕ್ಷಮೆ ಕೇಳಿದ ತುಂಟ ವಿಡಿಯೋ ವೈರಲ್ ಆಗಿದೆ.
ಇಲ್ಲ ಟೀಚರ್ ಇನ್ಮೇಲೆ ನಾನು ತಪ್ಪು ಮಾಡಲ್ಲ ಎಂದು ಬಾಲಕ ಬೇಡಿಕೊಂಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಟೀಚರ್, ಇಲ್ಲ ನೀನು ಕ್ಷಮೆ ಕೇಳಿ ಮತ್ತದೇ ತಪ್ಪು ಪದೇ ಪದೇ ಮಾಡ್ತಿಯ ಎಂದು ಮುನಿಸಿಕೊಂಡಿದ್ದಾರೆ. ಆಗ ಈ ಪ್ರಚಂಡ ಪುಟಾಣಿ ಶಿಕ್ಷಕಿಯನ್ನು ತಬ್ಬಿಕೊಂಡು ಕ್ಷಮೆ ಕೇಳಿದ್ದಾನೆ. ಮುತ್ತು ಕೊಟ್ಟಿದ್ದಾನೆ. ಇಷ್ಟು ಮುದ್ದಾಗಿ ಈ ಬಾಲಕ ಶಿಕ್ಷಕಿಯ ಮನವೊಲಿಸುತ್ತಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಘಟನೆ ಎಲ್ಲಿ ನಡೆದಿದ್ದು ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ.
PublicNext
13/09/2022 06:08 pm