ಬಿಬಿಎಂಪಿ: ಕಳೆದ ಎರಡು ವರ್ಷಗಳಿಂದ ಕೊವೀಡ್ ನಿಂದ ಕಳೆಗೊಂದಿದ್ದ ಗಣಪತಿ ಉತ್ಸವಕ್ಕೆ ಈ ಬಾರಿ ರಂಗು ಬಂದಿದೆ. ಅದ್ಧೂರಿಯಾಗಿ ಗಣಪನ ಪ್ರತಿಷ್ಠಾಪನೆಗೆ ಬಿಬಿಎಂಪಿಯು 15 ದಿನದಮಟ್ಟಿಗೆ ಎಡೆಮಾಡಿಕೊಟ್ಟಿತ್ತು. ಇದರ ಬೆನ್ನಲ್ಲೇ ಎಲ್ಲೆಡೆ ಹಬ್ಬದ ಸಂಭ್ರಮ ಹೆಚ್ಚಾಗಿತ್ತು. ಅದರಂತೆಯೇ ಇಂದು ಗಣಪತಿ ವಿಸರ್ಜನೆಗೆ ಬಿಬಿಎಂಪಿಯು ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದೆ.
ಇನ್ನು ಇಂದು ಶ್ರೀ ವಿನಾಯಕನ ವಿಸರ್ಜನೆಗೆ ಹಲವರು ದೊಡ್ಡ ದೊಡ್ಡ ಸಂಘ ಸಂಸ್ಥೆಗಳಿಂದ ತಮಟೆ , ಡೊಳ್ಳು , ಮುಂತಾದ ಸಲಕರಣೆಯೊಂದಿಗೆ ಮೆರವಣಿಗೆಗೆ ಸಕಲ ಸಿದ್ದತೆಗಳು ನಡೆಯುತ್ತಿವೆ .ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಕೂಡ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಆಯಾ ಸ್ಥಳದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ವಹಿಸಲು ಈಗಾಗಲೇ ಸೂಚನೆ ನೀಡಿದ್ದಾರೆ.
PublicNext
04/09/2022 02:38 pm