ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೃದಯಾಘಾತದಿಂದ ಮುಧೋಳ ತಹಶೀಲ್ದಾರ ನಿಧನ

ಬಾಗಲಕೋಟೆ: ಮುಧೋಳ ತಹಶೀಲ್ದಾರ್ ಸಂಗಮೇಶ್ ಬಾಡಗಿ ಅವರು ನಿನ್ನೆ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

38 ವರ್ಷ ವಯಸ್ಸಿನ ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮುಧೋಳ ಪಟ್ಟಣದ ನಿವಾಸದಲ್ಲೇ ಅವರು ನಿಧನರಾಗಿದ್ದಾರೆ. ವಿಷಯ ತಿಳಿದ ಉಪವಿಭಾಗಾಧಿಕಾರಿ ಸಿದ್ದು ಹುಲ್ಲಳ್ಳಿ ಸೇರಿದಂತೆ ಕಂದಾಯಾಧಿಕಾರಿಗಳು ಇತರ ಇಲಾಖೆ ಸಿಬ್ಬಂದಿ ಮೃತರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮೃತ ಸಂಗಮೇಶ್ ಬಾಡಗಿ ಅವರು ಅಥಣಿ ತಾಲೂಕಿನ ಜನವಾಡ ಗ್ರಾಮದವರಾಗಿದ್ದರು.

Edited By : Nagaraj Tulugeri
PublicNext

PublicNext

18/03/2022 12:48 pm

Cinque Terre

51.69 K

Cinque Terre

14

ಸಂಬಂಧಿತ ಸುದ್ದಿ