ಇಂದು ಅಧಿಕಾರ ಸ್ವೀಕಾರ ಮಾಡಿ ನೂತನ ಪೊಲೀಸ್ ಕಮಿಷನರ್ ಪ್ರತಾಪದ ರೆಡ್ಡಿಗೆ ಕಮಿಷನರ್ ಕಚೇರಿಯಲ್ಲಿ ಗೌರವ ಯುತ ಸ್ವಾಗತ ಕೋರಲಾಯಿತು. ಎಲ್ಲಾ ಹಿರಿಯ ಮತ್ತು ಕಿರಿಯ ಅಧಿಕಾರಿಗಳು ನೂತನ ಕಮಿಷನರ್ ಗೆ ಸ್ವಾಗತ ಕೋರಿ ಬರಮಾಡಿಕೊಂಡ್ರು
ರಾಜಧಾನಿಯಲ್ಲಿ ನಡೆಯುವಂತಹ ಗಂಭೀರ ಸ್ವರೂಪದ ಅಪರಾಧ ಪ್ರಕರಣ ನಿರ್ವಹಣೆ ಹಾಗೂ ತ್ವರಿತಗತಿಯಲ್ಲಿ ಇತ್ಯರ್ಥ ಆಗಬೇಕು, ಪ್ರತಿಯೊಂದು ವಿಭಾಗಗಳಲ್ಲಿ ಮೇಜರ್ ಕ್ರೈಂ ಮಾನಿಟರಿಂಗ್ ಸೆಲ್ ತೆರೆಯುವುದಾಗಿ ಭರವಸೆ ನೀಡಿದ್ರು.
ನಿರ್ಗಮಿತ ಪೊಲೀಸ್ ಆಯುಕ್ತ ಕಮಲ್ ಪಂತ್ ಅಧಿಕಾರ ಸ್ವೀಕರಿಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ನಗರದಲ್ಲಿ ದೊಡ್ಡ ಮಟ್ಟದ ಅಪರಾಧಗಳು ನಡೆದಾಗ ಕೂಡಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತಗತಿಯಲ್ಲಿ ಸೂಕ್ತ ಸಾಕ್ಷ್ಯಧಾರಗಳು ಸಂಗ್ರಹಿಸುವುದು ಅಗತ್ಯವಾಗಿದೆ. ಆರೋಪಿ ಬಂಧನದಿಂದ ಹಿಡಿದು ಚಾರ್ಜ್ ಶೀಟ್ ಹಂತದವರೆಗೂ ಚುರುಕಿನಿಂದ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ನಗರದ ಪ್ರತಿಯೊಂದು ವಲಯದಲ್ಲಿ ಮೇಜರ್ ಕ್ರೈಂ ಮಾನಿಟರಿಂಗ್ ಸೆಲ್ ತೆರೆಯಲಾಗುತ್ತದೆ. ಈ ಮೂಲಕ ಆರೋಪಿಗಳಿಗೆ ಬೇಗನೇ ಶಿಕ್ಷೆ ಪ್ರಕಟವಾಗುವ ಹಾಗೇ ನೋಡಿಕೊಳ್ಳಬೇಕು ಪ್ರತಾಪ್ ರೆಡ್ಡಿ ಸೂಚನೆ ನೀಡಿದ್ರು.
ಕಮಲ್‌ಪಂತ್ ನನ್ನ ಆಪ್ತಮಿತ್ರನರಾಗಿದ್ದು ಅವ್ರಿಂದ ಅಧಿಕಾರ ಸ್ವೀಕರಿಸಿರುವುದು ಖುಷಿಯಾಗಿದೆ. ಅವರು ಮಾಡಿದ ಒಳ್ಳೆಯ ಕೆಲಸವನ್ನ ಮುಂದುವರೆಸುತ್ತೇನೆ ಬೆಂಗಳೂರು ನಗರ ಗ್ಲೋಬಲ್ ಸಿಟಿಯಾಗಿದೆ. ಇಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಲಿದೆ. ಈ ನಿಟ್ಟಿನಲ್ಲಿ ಅತ್ಯಂತ ಜವಾಬ್ದಾರಿ ಹಾಗೂ ವಿಶ್ವಾಸಾರ್ಹ ರೀತಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಪೊಲೀಸ್ ವ್ಯವಸ್ಥೆಯನ್ನು ಬಲಗೊಳಿಸಿ ಕೆಲಸ ಮಾಡುತ್ತೇನೆ ರೌಡಿಗಳ ನಿಗ್ರಹ, ಡ್ರಗ್ಸ್ ಚಟುವಟಿಕೆ ಇನ್ನಷ್ಟು ಕಡಿವಾಣ ಹಾಕುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಹಾಗೇ ಜನಸಾಮಾನ್ಯರು ಠಾಣೆಯಲ್ಲಿ ನೀಡುವ ದೂರುಗಳ ಶೀಘ್ರವಾಗಿ ದಾಖಲಾಗಬೇಕು ಹಿಂದೇಟು ಹಾಕುವ ಅಧಿಕಾರ ಮೇಲೂ ಕ್ರಮದ ಎಚ್ಚರಿಕೆ ನೀಡಿದ್ರು
ಸಿಲಿಕಾನ್ ಸಿಟಿಯಲ್ಲಿ ಮಕ್ಕಳ ಹಾಗೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನ ನಡೆದಾಗ ಕೂಡಲೇ ತ್ವರಿತಗತಿಯಲ್ಲಿ ತನಿಖೆ ನಡೆಸಿ ಬಂಧಿತರನ್ನ ಫಾಸ್ಟ್ ಟ್ರ್ಯಾಕ್ ಕೋರ್ಟ್ ಹಾಜರಪಡಿಸುವ ಹಾಗೇ ಕ್ರಮಕೈಗೊಳ್ಳುತ್ತೇವೆ. ಅದೇ ಸಂಚಾರಿ ದಟ್ಟಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಚಾಲ್ತಿಯಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸುವ ಆದ್ಯತೆ ನೀಡುತ್ತೇನೆ ಎಂದರು.
ಸೈಬರ್ ಕ್ರೈಂ ನಿಯಂತ್ರಣಕ್ಕೆ ಒತ್ತು ಕೊಡುತ್ತೇನೆ. ಕೊರೊನಾ ಬಳಿಕ ವರ್ಕ್ ಫ್ರಂ ಹೋಮ್ ವ್ಯವಸ್ಥೆಯಿಂದ ಜನ ಹೊರ ಬಂದಿದ್ದಾರೆ. ಹೀಗಾಗಿ ಟ್ರಾಫಿಕ್ ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ನಿಲ್ಲಿಸಲಾಗಿರುವ ಟೊಯಿಂಗ್ ವ್ಯವಸ್ಥೆ ಮತ್ತೆ ಬರುವ ಮೂನ್ಸೂಚೆಯನ್ನೂ ನೂತನ ಕಮಿಷನರ್ ನೀಡಿದ್ರು
ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
17/05/2022 05:07 pm