ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಕಿಸ್ತಾನದಲ್ಲೀಗ ಮಲೇರಿಯಾ ಕಾಟ; ಭಾರತದಿಂದ 6 ದಶಲಕ್ಷ ಸೊಳ್ಳೆ ಪರದೆ ಖರೀದಿಗೆ ನಿರ್ಧಾರ

ಇಸ್ಲಾಮಾಬಾದ್: ಪ್ರವಾಹದಿಂದ ತತ್ತರಿಸಿದ್ದ ಪಾಕಿಸ್ತಾನದಲ್ಲಿ ಈಗ ಮಲೇರಿಯಾ ಕಾಟ ಶುರುವಾಗಿದೆ. ಎಲ್ಲೆಂದರಲ್ಲಿ ನೀರು ನಿಂತ ಪರಿಣಾಮ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದ್ದು, ದೇಶಾದ್ಯಂತ ಮಲೇರಿಯಾ ರೋಗ ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರದ ಆರೋಗ್ಯ ಸಚಿವಾಲಯವು ಭಾರತದಿಂದ 6 ದಶಲಕ್ಷ ಸೊಳ್ಳೆ ಪರದೆಗಳನ್ನು ಖರೀದಿ ಮಾಡಲು ತೀರ್ಮಾನ ಕೈಗೊಂಡಿದೆ.

ಈ ಸಂಬಂಧ ಮಂಗಳವಾರ ತೀರ್ಮಾನ ಕೈಗೊಂಡಿರುವ ಪಾಕಿಸ್ತಾನದ ಆರೋಗ್ಯ ಸಚಿವಾಲಯ, ಮಲೇರಿಯಾ ಸೇರಿದಂತೆ ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಡೆಯಲು ಹಾಗೂ ಬಡ ಜನರಿಗೆ ರಕ್ಷಣೆ ಒದಗಿಸಲು ಮುಂದಾಗಿದೆ. ಭಾರತದಿಂದ ಶೀಘ್ರದಲ್ಲೇ 6 ದಶಲಕ್ಷ ಸೊಳ್ಳೆ ಪರದೆಗಳನ್ನು ಆಮದು ಮಾಡಿಕೊಳ್ಳಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

Edited By : Abhishek Kamoji
PublicNext

PublicNext

11/10/2022 07:14 pm

Cinque Terre

31.32 K

Cinque Terre

1