ಬ್ರಹ್ಮಾವರ: ಉಕ್ರೇನ್‌ನಲ್ಲಿ ಯುದ್ಧದ ತೀವ್ರತೆ ಹೆಚ್ಚಾಗಿರುವ ಖಾರ್ಕಿವ್ ನಗರದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ರೋಹನ್ ಧನಂಜಯ ಬಗ್ಲಿ ಶುಕ್ರವಾರವೇ ದಿಲ್ಲಿ ಮೂಲಕ ಬೆಂಗಳೂರಿಗೆ ಬಂದಿದ್ದು, ಇವತ್ತು ಹುಟ್ಟೂರು ಬ್ರಹ್ಮಾವರ ತಲುಪಿದ್ದಾರೆ. ವಾರದಿಂದ ತೀವ್ರ ಆತಂಕದಲ್ಲಿ ಮನೆಮಗನನ್ನು ಕಾಯುತ್ತಿದ್ದ ಪೋಷಕರು, ಮಗ ಮನೆ ತಲುಪುವುದರೊಂದಿಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಖಾರ್ಕಿವ್‌ನ ಮೆಡಿಕಲ್ ವಿ.ವಿ.ಯಲ್ಲಿ ಓದುತ್ತಿದ್ದ ರೋಹನ್, ಕೆಲವು ದಿನ ಅಲ್ಲಿಯೇ ಬಂಕರ್‌ನಲ್ಲಿದ್ದರು. ನಂತರ ಪೋಲಂಡ್‌ಗೆ ಹೋಗಿ, ದಿಲ್ಲಿಗೆ ಬಂದಿದ್ದರು. ತಂದೆ ಡಾ. ಧನಂಜಯ್ ಬಗ್ಗಿಯವರು ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಿರಿಯ ವಿಜ್ಞಾನಿ. ಜಿಲ್ಲೆಯ ನಿವಾಸಿಗಳಾದ ಗ್ಲೆನ್ ವಿಲ್ ಫೆರ್ನಾಂಡಿಸ್ ಸದ್ಯ ರಾಯಭಾರ ಕಚೇರಿಯ ನಿರ್ದೇಶನದಂತೆ ಖಾರ್ಕಿವ್ ಸಮೀಪದ ನಗರದಲ್ಲಿದ್ದಾರೆ. ಅನಿಫ್ರೆಡ್ ರಿಡ್ಲಿ ಡಿಸೋಜ ಹಂಗೇರಿಯಲ್ಲಿರುವ ಬಗ್ಗೆ ಮಾಹಿತಿಯಿದೆ.
ಇವತ್ತು ರೋಹನ್ ಮನೆಗೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಕೆಲ ಮಾಹಿತಿ ಕೇಳಿ ತಿಳಿದುಕೊಂಡರು. ರೋಹನ್, ಉಕ್ರೇನ್ ನ ಸ್ಥಿತಿಗತಿ ಮತ್ತು ಅಲ್ಲಿ ಕಳೆದ ಆತಂಕದ ದಿನಗಳನ್ನು ಹಂಚಿಕೊಂಡರು.
PublicNext
06/03/2022 01:29 pm