ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಕ್ರೇನ್‌ನಲ್ಲಿ ಸಿಲುಕಿದ್ದ ಉಡುಪಿ ಜಿಲ್ಲೆಯ ಮೃಣಾಲ್ ತಾಯ್ನಾಡಿಗೆ ವಾಪಸ್

ಉಡುಪಿ: ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದ ಉಡುಪಿ ಜಿಲ್ಲೆಯ ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ನಿನ್ನೆ ರಾತ್ರಿ ರೊಮೇನಿಯಾ ಮೂಲಕ ಹೊಸದಿಲ್ಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಉದ್ಯಾವರ ಸಾಲ್ಮರದ ರಾಜೇಶ್ ಎಂಬವರ ಪುತ್ರ ಮೃಣಾಲ್ ಜಿಲ್ಲೆಯಲ್ಲೇ ಮೊದಲಿಗರಾಗಿ ನಿನ್ನೆ ಸಂಜೆ 6 ಗಂಟೆಗೆ ಹೊಸದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಉಕ್ರೇನಿನಿಂದ ಆಗಮಿಸಿದ ಭಾರತೀಯ ವಿದ್ಯಾರ್ಥಿಗಳೇ ತುಂಬಿದ್ದ ಈ ವಿಮಾನದಲ್ಲಿ ಕರ್ನಾಟಕದ ಏಕೈಕ ವಿದ್ಯಾರ್ಥಿ ಇವರಾಗಿದ್ದರು.

ಯುದ್ಧಗ್ರಸ್ಥ ಉಕ್ರೇನಿನಿಂದ ಆಗಮಿಸಿದ ಉಳಿದೆಲ್ಲ ರಾಜ್ಯಗಳ ವಿದ್ಯಾರ್ಥಿಗಳನ್ನು ಸ್ವಾಗತಿಸಲು, ಅವರಿಗೆ ಹುಟ್ಟೂರಿಗೆ ತೆರಳಲು ವಿಮಾನ ಸೇರಿದಂತೆ ಇತರ ವ್ಯವಸ್ಥೆ ಕಲ್ಪಿಸಲು ಆಯಾ ರಾಜ್ಯಗಳ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿದ್ದರು. ಆದರೆ ಕರ್ನಾಟಕದಿಂದ ಯಾವೊಬ್ಬ ಅಧಿಕಾರಿಯೂ ಅಲ್ಲಿ ಉಪಸ್ಥಿತರಿರಲಿಲ್ಲ ಎನ್ನಲಾಗಿದೆ.

ರಾತ್ರಿಯ ವೇಳೆ ಕರ್ನಾಟಕದ ಅಧಿಕಾರಿಗಳು ಮೃಣಾಲ್ ಅವರನ್ನು ಸಂಪರ್ಕಿಸಿದ್ದು ತಡ ರಾತ್ರಿಯೇ ಬೆಂಗಳೂರಿಗೆ ಪ್ರಯಾಣಿಸಲು ವ್ಯವಸ್ಥೆ ಮಾಡಿದ್ದಾರೆ. ಇಂದು ಅವರು ಬೆಂಗಳೂರು ತಲುಪಲಿದ್ದಾರೆ. ಬೆಂಗಳೂರಿನಿಂದ ಮೊದಲ ವಿಮಾನದಲ್ಲಿ ಮಂಗಳೂರಿಗೆ ಬರಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Edited By : Nagaraj Tulugeri
PublicNext

PublicNext

28/02/2022 09:19 am

Cinque Terre

31.42 K

Cinque Terre

0