ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಫ್ಘಾನ್‌ನಿಂದ 7 ಮಂದಿ ಕನ್ನಡಿಗರು ತಾಯ್ನಾಡಿಗೆ ವಾಪಸ್

ಬೆಂಗಳೂರು: ತಾಲಿಬಾನ್ ವಶವಾಗಿರುವ ಅಫ್ಘಾನಿಸ್ತಾನದಿಂದ ಬೆಂಗಳೂರಿನ ಒಬ್ಬರು, ಮಂಗಳೂರಿನ ಐವರು ಹಾಗೂ ಬಳ್ಳಾರಿಯ ಒಬ್ಬರು ಕಾಬೂಲ್‌ನಿಂದ ಹೊರಟು ಸುರಕ್ಷಿತವಾಗಿ ಮರಳಿ ಭಾರತಕ್ಕೆ ಬಂದಿದ್ದು, ಇನ್ನೂ ಮೂವರು ಅಲ್ಲಿಯೇ ಇದ್ದಾರೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿದೆ.

ಬೆಂಗಳೂರು, ಮಾರತ್ತಳ್ಳಿಯ ಹೀರಕ್ ದೇಬನಾಥ್, ಬಳ್ಳಾರಿಯ ತನ್ವೀರ್ ಬಳ್ಳಾರಿ ಅಬ್ದುಲ್-ಸಂಡೂರು, ದಿನೇಶ್ ರೈ- ಬಜ್ಪೆ, ಮಂಗಳೂರು, ಜಗದೀಶ ಪೂಜಾರಿ-ಮೂಡಬಿದ್ರೆ, ಮಂಗಳೂರು, ಶ್ರವಣ ಅಂಚನ್-ಮಂಗಳೂರು, ಪ್ರಸಾದ್ ಆನಂದ್-ಉಳ್ಳಾಲ, ಮಂಗಳೂರು ಪಕ್ಷಿಕೆರೆ ಮೂಲದ ಡೆಸ್ಮಂಡಡ್ ಡಿಸೋಜಾ ಸದ್ಯ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ.

ಇದಲ್ಲದೇ ಇನ್ನೂ ಮೂವರು ಕನ್ನಡಿಗರು ಕಾಬೂಲ್ ಏರ್ ಪೋರ್ಟ್‌ನಲ್ಲಿಯೇ ಇದ್ದು, ಈ ಮೂವರಲ್ಲಿ ಒಬ್ಬರು ಇಟಲಿಗೆ ಹೋಗಲಿದ್ದಾರೆ. ಮಂಗಳೂರು ಮೂಲದ ತೆರೆಸಾ ಕ್ರೋಸ್ತಾ ಅಪ್ಘಾನಿಸ್ತಾನದಿಂದ ನೇರವಾಗಿ ಇಟಲಿಗೆ ಹೋಗಲಿದ್ದಾರೆ. ರಾಬರ್ಟ್ ಕ್ಲೀವ್ ಎನ್‌ ಆರ್ ಪುರ, ಚಿಕ್ಕಮಗಳೂರು ಮೂಲದವರು ಹಾಗೂ ಜಿರೋನಾ ಸೆಕ್ವೆರಾ ಮಂಗಳೂರು ಮೂಲದವರಾದ ಇಬ್ಬರು ಭಾರತಕ್ಕೆ ಮರಳಿ ಬರಲು ಕಾಯುತ್ತಿದ್ದಾರೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿದೆ.

Edited By : Vijay Kumar
PublicNext

PublicNext

22/08/2021 10:28 pm

Cinque Terre

36.86 K

Cinque Terre

0

ಸಂಬಂಧಿತ ಸುದ್ದಿ