ನವದೆಹಲಿ: ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಯವರ ಪ್ರಯಾಣಿಸಲೆಂದೇ ಅತ್ಯಂತ ಸುರಕ್ಷಿತ ಪ್ರಯಾಣಕ್ಕಾಗಿ ವಿಶೇಷ ಏರ್ ಇಂಡಿಯಾ ಒನ್ B777 (ಬೋಯಿಂಗ್-777) ವಿಶೇಷ ವಿಮಾನ ಅಮೆರಿಕದಿಂದ ಭಾರತಕ್ಕೆ ಆಗಮಿಸಿದೆ.
ಭಾರತ ಬದಲಾಗುತ್ತಿದೆ, ದೇಶದ ಶಕ್ತಿಶಾಲಿ ರಾಷ್ಟ್ರವಾಗುತ್ತಿರುವ ಭಾರತದ ಪ್ರಧಾನಿಗೆ ಅತ್ಯಾಧುನಿಕ ತಂತ್ರಜ್ಞಾನದ ವಿಮಾನ ಅತ್ಯಗತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಈವರೆಗೂ ಕಾಣದ ಅತ್ಯಾಧುನಿಕ ಭದ್ರತೆಯನ್ನು ಹೊಂದಿದ ಈ ಹೊಸ ಅತ್ಯುತ್ತಮವಾದ ವಿಮಾನವನ್ನು ಪ್ರಧಾನಿಗಾಗಿ ತಯಾರು ಮಾಡಲಾಗಿದ್ದು, ಗುರುವಾರ ಅಪರಾಹ್ನ 3 ಗಂಟೆಗೆ ಏರ್ ಇಂಡಿಯಾ ಒನ್ ಭಾರತಕ್ಕೆ ಬಂದಿಳಿದಿದೆ.
ಭಾರತೀಯ ವಾಯುಪಡೆಯ ಪೈಲಟ್‌ಗಳು 'ಏರ್ ಇಂಡಿಯಾ ಒನ್' ಬಿ777 ಹಾರಾಟ ಮುನ್ನಡೆಸಲಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ವಿದೇಶಿ ಪ್ರವಾಸ ಹಾಗೂ ಇತರ ವಿಶೇಷ ಸಂಚಾರಕ್ಕೆ ಮಾತ್ರವೇ ಈ ವಿಮಾನಗಳನ್ನು ಬಳಸಲಾಗುತ್ತದೆ.
2018ರಲ್ಲಿ ಈ ಎರಡು ವಿಮಾನಗಳನ್ನು ಏರ್ ಇಂಡಿಯಾ ಖರೀದಿಸಿತ್ತು. ಕೆಲ ತಿಂಗಳ ಕಾಲ ಇದನ್ನು ನಾಗರಿಕ ವಿಮಾನವಾಗಿಯೂ ಬಳಸಿಕೊಳ್ಳಲಾಗಿತ್ತು. ನಂತರ ಗಣ್ಯವಕ್ತಿಗಳ ಪ್ರಯಾಣಕ್ಕಾಗಿ, ವಿಮಾನದ ವಿನ್ಯಾಸ ಹಾಗೂ ರಕ್ಷಣಾ ವ್ಯವಸ್ಥೆಯನ್ನು ಬದಲಾಯಿಸಲು ಬೋಯಿಂಗ್ ಕಂಪನಿಗೆ ಕಳುಹಿಸಲಾಗಿತ್ತು, ಈ ವಿಮಾನಗಳ ಖರೀದಿ ಹಾಗೂ ಅದನ್ನು ಮರುವಿನ್ಯಾಸಗೊಳಿಸಲು ₹8,400 ಕೋಟಿ ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ.
PublicNext
02/10/2020 07:55 am