ಹೊಸದಿಲ್ಲಿ: ದೇಶದಲ್ಲಿ ಮತ್ತೆ 43 ಮೊಬೈಲ್ ಆ್ಯಪ್ ಗಳ ಮೇಲೆ ನಿಷೇಧ ಹೇರಿರುವುದನ್ನು, ಚೀನಾ ರಾಯಭಾರ ಕಚೇರಿ ಖಂಡಿಸಿದೆ.
ಭಾರತ ಪದೇ ಪದೇ ರಾಷ್ಟ್ರೀಯ ಭದ್ರತೆ ನೆಪದಲ್ಲಿ ಚೀನಿ ಮೊಬೈಲ್ ಆ್ಯಪ್ ಗಳ ಮೇಲೆ ನಿಷೇಧ ಹೇರುತ್ತಿರುವುದು ಸರಿಯಲ್ಲ ಎಂದು ಚೀನಾದ ರಾಯಭಾರ ಕಚೇರಿ ವಕ್ತಾರ ಜಿ ರಾಂಗ್ ಅಸಮಾಧಾನ ಹೊರಹಾಕಿದ್ದಾರೆ.
ಭಾರತ ನ್ಯಾಯಯುತ, ನಿಷ್ಪಕ್ಷಪಾತ ಮತ್ತು ತಾರತಮ್ಯವಿಲ್ಲದ ವ್ಯಾಪಾರ ವಾತಾವರಣವನ್ನು ಒದಗಿಸುತ್ತದೆ ಎಂಬ ಭರವಸೆ ಇದೆ ಎಂದು ಜಿ ರಾಂಗ್ ಟ್ವೀಟ್ ಮಾಡಿದ್ದಾರೆ.
ಚೀನಾ ತನ್ನ ಸಾಗರರೋತ್ತರ ಕಂಪನಿಗಳಿಗೆ ಅಂತಾರಾಷ್ಟ್ರೀಯ ವ್ಯಾಪಾರ ನಿಯಮವನ್ನು ಪಾಲಿಸುವಂತೆ ಕಟ್ಟುನಿಟ್ಟಿನ ಸಲಹೆ ನೀಡಿರುತ್ತದೆ.
ಕಾನೂನು ಮತ್ತು ನಿಬಂಧನೆಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುವ ಕಂಪನಿಗಳಿಗೆ ಹೀಗೆ ಏಕಾಏಕಿ ಹೊಡೆತ ನೀಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಜಿ ರಾಂಗ್ ನುಡಿದಿದ್ದಾರೆ.
ಭಾರತ ಸರ್ಕಾರದ ಮೊಬೈಲ್ ಆ್ಯಪ್ ನಿಷೇಧ ನಿರ್ಧಾರ ೆರಡು ದೇಶಗಳ ಸೌಹಾರ್ದಯುತ ವಾತಾವರಣದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬ್ಯಾನ್ ಆಗಿರುವ ಆ್ಯಪ್ ಗಳಲ್ಲಿ 4 ಮೊಬೈಲ್ ಆ್ಯಪ್ ಗಳು ಚೀನಾದ ದೈತ್ಯ ಅಲಿಬಾಬಾ ಕಂಪನಿಯ ಒಡೆತನದ ಮೊಬೈಲ್ ಆ್ಯಪ್ ಗಳೂ ಸೇರಿವೆ ಎಂಬುದನ್ನು ಇಲ್ಲಿ ಸ್ಮರಿಬಹುದು.
PublicNext
25/11/2020 08:19 pm