ಬೆಂಗಳೂರು: ರೂಪಾಂತರ ಕೊರೊನಾ ಮುಂಜಾಗೃತಿಗಾಗಿ ನೈಟ್ ಕರ್ಫ್ಯೂ ಜಾರಿಗೊಳಿಸಿದ ರಾಜ್ಯ ಸರ್ಕಾರ ಏಕಾಏಕಿ ಈ ಆದೇಶವನ್ನು ಹಿಂಪಡೆದಿದೆ.
ಈ ನಿರ್ಣಯದಿಂದ ಎಲ್ಲರೂ ಸರ್ಕಾರವನ್ನು ನೋಡಿ ಕಾಮಿಡಿ ಸರ್ಕಾರ ಎಂದು ವ್ಯಂಗ್ಯ ಮಾಡಿದ್ದಾರೆ.
ಹೌದು ಕೊರೊನಾ ಕಂಟ್ರೋಲ್ ಗಾಗಿ ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿರುವುದು ಇಲ್ಲಿ ಸಾಮಾನ್ಯವಾಗಿ ಕಂಡು ಬಂದಿದೆ.
ಯಾವುದೇ ಸಾಧಕ ಬಾಧಕಗಳನ್ನು ಪರಿಗಣಿಸದೇ, ಯಾರ ಅಭಿಪ್ರಾಯವನ್ನು ಕೇಳದ ಸರ್ಕಾರ ತೆಗೆದುಕೊಂಡ ಬೇಜವಾಬ್ದಾರಿಯುತ ನಿರ್ಧಾರಗಳು ಸರಕಾರಕ್ಕೆ ಮುಜುಗರ ತಂದಿಟ್ಟಿದೆ.
ನೈಟ್ ಕರ್ಫ್ಯೂ ಬಗ್ಗೆ ನಿನ್ನೆಯಷ್ಟೇ ಹೊರಡಿಸಿದ್ದ ಆದೇಶವನ್ನು ಕೇವಲ 24 ಗಂಟೆಗಳಲ್ಲಿ ವಾಪಸ್ ಪಡೆದಿದೆ.
ನೈಟ್ ಕರ್ಫ್ಯೂ ವಾಪಸ್ ಗೆ ಕಾರಣಗಳು..?
* ರಾತ್ರಿ 11ರ ನಂತರ ನೈಟ್ ಕರ್ಫ್ಯೂಗೆ ಜನರ ತೀವ್ರ ವಿರೋಧ
* ವಿಪಕ್ಷಗಳ ಜೊತೆ ಸ್ವಪಕ್ಷೀಯರಿಂದಲೂ ವ್ಯಕ್ತವಾದ ಟೀಕೆ
* ಆಟೋ, ಹೋಟೆಲ್, ಬಾರ್ ಮಾಲೀಕರಿಂದ ವ್ಯಕ್ತವಾದ ಪ್ರತಿರೋಧ
* ನೈಟ್ ಕರ್ಫ್ಯೂ ಉದ್ದೇಶ, ಪ್ರಯೋಜನ ವಿವರಿಸುವಲ್ಲಿ ವಿಫಲ
* ಮಾಧ್ಯಮಗಳು ಹೇರಿದ ಒತ್ತಡ
PublicNext
24/12/2020 10:40 pm