ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2021 ರ ಸಾರ್ವತ್ರಿಕ ರಜೆ ಲಿಸ್ಟ್ ರಿವೀಲ್ :3 ರಜೆಗೆ ಕೊಕ್ಕೆ

ಬೆಂಗಳೂರು: ಹೊಸ ವರ್ಷಕ್ಕೆ ಒಂದು ತಿಂಗಳು ಬಾಕಿ ಇರುವಾಗಲೇ ಸರ್ಕಾರ ನೂತನ ವರ್ಷದ ಸಾರ್ವತ್ರಿಕ ರಜೆ ಲಿಸ್ಟ್ ಬಿಡುಗಡೆ ಮಾಡಿದೆ.

ಆ ಪ್ರಕಾರ 2021ನೇ ಸಾಲಿಗೆ 20 ಸಾರ್ವತ್ರಿಕ ರಜಾದಿನಗಳನ್ನು ಸರ್ಕಾರ ಘೋಷಿಸಿದೆ.

ಆದರೆ 2021ರ ಸಾರ್ವತ್ರಿಕ ರಜಾದಿನಗಳ ಪಟ್ಟಿಯಲ್ಲಿ ಸ್ವಾತಂತ್ರ್ಯೋತ್ಸವ, ಕ್ರಿಸ್ ಮಸ್ ಹಾಗೂ ಮಹಾವೀರ ಜಯಂತಿಗೆ ಸರ್ಕಾರ ರಜೆಯನ್ನಾ ಕಟ್ ಮಾಡಿದೆ.

2021ನೇ ಸಾಲಿನ ಸಾರ್ವತ್ರಿಕ ರಜಾದಿನಗಳ ಪಟ್ಟಿ ಜನವರಿ 14ರ ಮಕರ ಸಂಕ್ರಾಂತಿಯಿಂದ ಆರಂಭವಾಗಿ ನವೆಂಬರ್ 22ರ ಕನಕದಾಸ ಜಯಂತಿಯಂದು ಮುಕ್ತಾಯಗೊಳ್ಳುತ್ತದೆ.

ಈ ಮಧ್ಯೆ ಗಣರಾಜ್ಯೋತ್ಸವ, ಮಹಾಶಿವರಾತ್ರಿ, ಗುಡ್ಫ್ರೈಡೇ, ಯುಗಾದಿ, ಅಂಬೇಡ್ಕರ್ ಜಯಂತಿ, ಕಾರ್ಮಿಕರ ದಿನಾಚರಣೆ, ಬಸವ ಜಯಂತಿ, ಅಕ್ಷಯ ತೃತೀಯ, ರಮ್ಜಾನ್, ಬಕ್ರೀದ್, ಮೊಹರಂ, ವರಸಿದ್ಧಿ ವಿನಾಯಕ ವ್ರತ, ಗಾಂಧಿ ಜಯಂತಿ, ಮಹಾಲಯ ಅಮಾವಾಸ್ಯೆ, ಆಯುಧಪೂಜೆ, ವಿಜಯದಶಮಿ, ವಾಲ್ಮೀಕಿ ಜಯಂತಿ, ಈದ್ ಮಿಲಾದ್, ಕರ್ನಾಟಕ ರಾಜ್ಯೋತ್ಸವ, ನರಕ ಚತುರ್ದಶಿ, ಬಲಿಪಾಡ್ಯಮಿ, ದೀಪಾವಳಿ ರಜೆಗಳು ಈ ಪಟ್ಟಿಯಲ್ಲಿವೆ.

ಆದರೆ ಮಹಾವೀರ ಜಯಂತಿ, ಸ್ವಾತಂತ್ರ್ಯೋತ್ಸವ, ಕ್ರಿಸ್ ಮಸ್ ರಜೆಗಳು ಪಟ್ಟಿಯಲ್ಲಿಲ್ಲ.

ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿರುವ ಸರ್ಕಾರ ಮಹಾವೀರ ಜಯಂತಿ( ಏಪ್ರಿಲ್ 25) ಹಾಗೂ ಸ್ವಾತಂತ್ರ್ಯೋತ್ಸವ (ಆಗಸ್ಟ್ 15) ಎರಡೂ ಭಾನುವಾರದಂದು ಮತ್ತು ಕ್ರಿಸ್ ಮಸ್ ರಜಾದಿನವಾದ ನಾಲ್ಕನೇ ಶನಿವಾರದಂದು ಇರುವುದರಿಂದ ಅವುಗಳನ್ನು ಸಾರ್ವತ್ರಿಕ ರಜಾದಿನಗಳ ಪಟ್ಟಿಯಲ್ಲಿ ಸೇರಿಸಿಲ್ಲ ಎಂದು ಕರ್ನಾಟಕ ಸರ್ಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.

Edited By : Nirmala Aralikatti
PublicNext

PublicNext

23/11/2020 05:03 pm

Cinque Terre

47.07 K

Cinque Terre

1