ಹುಬ್ಬಳ್ಳಿ : ಕಾರ್ಮಿಕರ ಪಿಂಚಣಿ ಯೋಜನೆ -95 ಅಡಿಯಲ್ಲಿ ಪಿಂಚಣಿ ಪಡೆಯುವ ಪಿಂಚಣಿದಾರರು 2021 ರ ಮಾಸಿಕ ಪಿಂಚಣಿ ಪಾವತಿಯನ್ನು ಮುಂದುವರೆಸಲು ನವೆಂಬರ್ ಮತ್ತು ಡಿಸೆಂಬರ್ ನಲ್ಲಿ “ಜೀವನ್ ಪ್ರಮಾಣ ಪತ್ರ - ಡಿಜಿಟಲ್ ಲೈಫ್ ಸರ್ಟಿಫಿಕೇಟ್” ಅನ್ನು ನೋಂದಾಯಿಸಿಕೊಳ್ಳಬೇಕು.
ಆದಾಗ್ಯೂ, COVID-19, EPFO ಯ ಪ್ರಸ್ತುತ ಪರಿಸ್ಥಿತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಪಿಂಚಣಿದಾರರ ಸರತಿ ಸಾಲುಗಳನ್ನು ಹಾಗೂ ಗುಂಪು ಸೇರುವುದನ್ನು ತಪ್ಪಿಸಲು, ಜೀವನ್ ಪ್ರಮಾಣ ಪತ್ರ - ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯಲು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಂಡಿದೆ.
1. ಜೀವನ್ ಪ್ರಮಾಣ ಪತ್ರವನ್ನು ವರ್ಷಪೂರ್ತಿ ಪಡೆಯಬಹುದು ಮತ್ತು ಜೀವನ್ ಪ್ರಮಾಣ ಪತ್ರವನ್ನು ಯಶಸ್ವಿಯಾಗಿ ಪಡೆಯುವ ದಿನಾಂಕದಿಂದ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ.
2. ಜನವರಿ 2020 ರ ನಂತರ ಜೀವನ್ ಪ್ರಮಾಣ ಪತ್ರವನ್ನು ಪಡೆದ ಪಿಂಚಣಿದಾರರು, ಹಿಂದಿನ ಜೀವನ್ ಪ್ರಮಾಣ ಪತ್ರವನ್ನು ಪಡೆದ ದಿನಾಂಕದಿಂದ ಒಂದು ವರ್ಷ ಪೂರ್ಣಗೊಂಡ ನಂತರ ಅದನ್ನು ಪಡೆಯಬಹುದು.
3. ಅದೇ ರೀತಿ 2020 ರಲ್ಲಿ ಪಿಂಚಣಿ ಪಾವತಿ ಆದೇಶ ಹೊರಡಿಸಲಾಗಿರುವ ಹೊಸ ಪಿಂಚಣಿದಾರರು ಪಿಂಚಣಿ ಆದೇಶ ಪತ್ರ ನೀಡಿದ ದಿನಾಂಕದಿಂದ ಮುಂದಿನ ಒಂದು ವರ್ಷದವರೆಗೆ ಜೀವನ್ ಪ್ರಮಾಣ ಪತ್ರವನ್ನು ನೋಂದಾಯಿಸÀÀಬೇಕಾಗಿಲ್ಲ.
4. ಪ್ರಾದೇಶಿಕ ಕಚೇರಿಯ ವ್ಯಾಪ್ತಿಯಲ್ಲಿ ಜೀವನ್ ಪ್ರಮಾಣ ಪತ್ರವನ್ನು ಮಾಡಲು ಅಧಿಕಾರ ಹೊಂದಿರುವ ಸುಮಾರು 1000 ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳಿವೆ, ಅಂದರೆ, ಧಾರವಾಡ, ಬೆಳಗಾವಿ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪಿಂಚಣಿದಾರರ ಸೇವೆಗೆ ಅವರ ಮನೆಯ ಹತ್ತಿರ ಇವೆ. ಪಿಂಚಣಿದಾರರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರದಿಂದ ಜೀವನ್ ಪ್ರಮಾಣ ಪತ್ರವನ್ನು ಪಡೆಯಬಹುದು. ಹತ್ತಿರದ ಸಿಎಸ್ ಸಿಯನ್ನು ಹುಡುಕಲು,https://locator.csccloud.in/ ಲಿಂಕ್ ಅನ್ನು ಕ್ಲಿಕ್ ಮಾಡಿ. CxÀªÁ SMS: JPL
5. ಪಿಂಚಣಿದಾರರು ಅಗತ್ಯವಿದ್ದಲ್ಲಿ, ಹಿಂದಿನ ವರ್ಷಗಳಂತೆ ಜೀವನ್ ಪ್ರಮಾಣ ಪತ್ರವನ್ನು ಪಡೆಯಲು ಆಯಾ ಬ್ಯಾಂಕ್ ಶಾಖೆಗಳನ್ನು ಸಹ ಸಂಪರ್ಕಿಸಬಹುದು.
ಆದ್ದರಿಂದ ಎಲ್ಲಾ ಕಾರ್ಮಿಕರ ಪಿಂಚಣಿ ಯೋಜನೆ -95 ಅಡಿಯಲ್ಲಿ ಪಿಂಚಣಿದಾರರು “ಜೀವನ್ ಪ್ರಮಾಣ ಪತ್ರ - ಡಿಜಿಟಲ್ ಲೈಫ್ ಸರ್ಟಿಫಿಕೇಟ್” ಅನ್ನು 2019-20ರಲ್ಲಿ ಜೀವನ್ ಪ್ರಮಾಣ ನವೀಕರಿಸಿದ ದಿನಾಂಕದಿಂದ ಒಂದು ವರ್ಷದೊಳಗೆ ತಮ್ಮ ಪಿಂಚಣಿಯನ್ನು ನಿರಂತರವಾಗಿ ಪಡೆಯಲು ಜೀವನ ಪ್ರಮಾಣ ಪತ್ರ ನೋಂದಾಯಿಸಿಕೊಳ್ಳಬೇಕಾದದ್ದು ಅವಶ್ಯಕ. ಮೇಲೆ ತಿಳಿಸಿದಂತೆ “ಜೀವನ್ ಪ್ರಮಾಣ ಪತ್ರ - ಡಿಜಿಟಲ್ ಲೈಫ್ ಸರ್ಟಿಫಿಕೇಟ್” ಅನ್ನು ಸಲ್ಲಿಸದ ಪಿಂಚಣಿದಾರರಿಗೆ ಸಂಬಂಧಿಸಿದ ಪಿಂಚಣಿ ಹಿಂದಿನ ಜೀವನ್ ಪ್ರಮಾಣ ಪತ್ರವನ್ನು ಪಡೆದ ದಿನಾಂಕದಿಂದ ಒಂದು ವರ್ಷ ಪೂರ್ಣಗೊಂಡ ನಂತರ ನಿಲ್ಲಿಸಲಾಗುವುದು.
ಅನಾರೋಗ್ಯದಿಂದ ಬಳಲುತ್ತಿರುವ ಪಿಂಚಣಿದಾರರ ಕುಟುಂಬ ಸದಸ್ಯರು ಈ ಕಚೇರಿಗೆ ro.hubli@epfindia.gov.in ಗೆ ಸಂಪೂರ್ಣ ವಿವರಗಳೊಂದಿಗೆ ತಿಳಿಸಿದಲ್ಲಿ ಭವಿಷ್ಯ ನಿಧಿ ಕಚೇರಿಯಿಂದ ಅವರ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಅವರ ನಿವಾಸದಲ್ಲಿ ನೋಂದಾಯಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಕ್ಷೇತ್ರೀಯ ಭವಿಷ್ಯನಿಧಿ ಆಯುಕ್ತ (1) ಮಿಹೀರ್ ಕುಮಾರ ತಿಳಿಸಿದ್ದಾರೆ.
PublicNext
05/11/2020 02:31 pm