ವರದಿ: ರಾಘವೇಂದ್ರ ದಾಸರಹಳ್ಳಿ
ಮಧುಗಿರಿ:ಬಗರ್ ಹುಕುಂ ಭೂಮಿ ಮಂಜೂರಾತಿಯಲ್ಲಿ ಉಳುಮೆ ಮಾಡಿ ಅನುಭೋಗ ದಲ್ಲಿರುವ ರೈತನಿಗೆ ಬಿಟ್ಟು ಎಲ್ಲೋ ಇರುವಂತಹ ಬಗರ್ ಹುಕುಂ ಜಮೀನು ಪಡೆಯಲು ಅರ್ಜಿ ಆಗಿರುವವರಿಗೆ ಜಮೀನು ನೋಡುತ್ತೀರಾ.? ಹತ್ತಾರು ವರ್ಷಗಳಿಂದ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ನಮಗೆ ಅನ್ಯಾಯ ಮಾಡುತ್ತೀರಾ ? ಯಾವ ಮಾನದಂಡದ ಮೇಲೆ ಫಲಾನುಭವಿಗಳ ಆಯ್ಕೆ ಮಾಡುತ್ತೀರಾ.? ನಾವು ಬಗರ್ ಹುಕುಂ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಕಡತಗಳನ್ನು ಕಚೇರಿಯಿಂದಲೇ ನಾಪತ್ತೆ ಮಾಡುತ್ತೀರಾ ? ಅರ್ಜಿ ಸಲ್ಲಿಸುವ ನಮಗೆ ಅನ್ಯಾಯವಾಗಿದೆ. ಈ ಬಗ್ಗೆ ತನಿಖೆ ಆಗಬೇಕು, ಅರ್ಹ ಫಲಾನುಭವಿ ರೈತರಿಗೆ ಭೂಮಿ ದೊರಕಬೇಕು ಎಂದು ರೈತ ಕೆ.ಎಚ್ ನಾರಾಯಣ್ ಸೇರಿದಂತೆ ಇತರರು ತಹಶೀಲ್ದಾರ್ ಸುರೇಶ್ ಆಚಾರ್ ವಿರುದ್ಧ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ಹರಿಹಾಯ್ದರು.
ಮಧುಗಿರಿ ತಾಲೂಕಿನ ಚೌಳ ಹಳ್ಳಿ ಗ್ರಾಮದಲ್ಲಿ ನಡೆದಂತಹ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನದಲ್ಲಿ ತಾಲೂಕು ಆಡಳಿತದ ಕಾರ್ಯವೈಖರಿಯ ಬಗ್ಗೆ ಗುಡುಗಿದರು.
ಒಟ್ಟಾರೆ ಬಗರ್ಹುಕುಂ ನಲ್ಲಿ ಮಧುಗಿರಿ ತಾಲೂಕಿನಲ್ಲಿ ಮಾತ್ರವಲ್ಲದೆ ಇಡೀ ತುಮಕೂರು ಜಿಲ್ಲೆಯಾದ್ಯಂತ ಪ್ರತಿ ತಾಲೂಕಿನಲ್ಲೂ ಅರ್ಹರಿಗೆ ಬಿಟ್ಟು ಪ್ರಭಾವಿಗಳಿಗೆ ಭೂಮಿ ಮಂಜೂರು ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಕಂದಾಯ ಇಲಾಖೆಯ ಮಂತ್ರಿಗಳು ಮತ್ತು ಸಂಬಂಧಪಟ್ಟ ಮೇಲಾಧಿಕಾರಿಗಳು ಸೂಕ್ತ ಕ್ರಮವನ್ನು ಬಯಸಿ ಭೂಮಿ ಮಂಜೂರಾತಿಯ ಬಗ್ಗೆ ಪರಿಶೀಲಿಸಬೇಕು, ಇಲ್ಲವಾದಲ್ಲಿ ಅರ್ಹರಿಗೆ ಅನ್ಯಾಯ ಪ್ರಭಾವಿಗಳಿಗೆ ಭೂಮಿ ಎನ್ನುವಂತಾಗುತ್ತದೆ! ಇನ್ನಾದರೂ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಒತ್ತಾಯವಾಗಿದೆ.
PublicNext
17/07/2022 10:01 am