ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬೆಳೆ ವಿಮೆ ಕಂಪನಿ ತಪ್ಪಿತಸ್ಥರಾಗಿದ್ದರೇ ಕ್ರಮ ಕೈಗೊಳ್ಳುವುದು ಖಂಡಿತ: ಸಚಿವ ಬಿ.ಸಿ.ಪಾಟೀಲ

ಹುಬ್ಬಳ್ಳಿ: ಬೆಳೆ ವಿಮೆ ವಿಚಾರದಲ್ಲಿ ವಂಚನೆ ಮಾಡಲು ಬಿಡುವುದಿಲ್ಲ. ವಂಚನೆ ಮಾಡುವುವರಿಗೆ ಈಗಾಗಲೇ ತಾಕೀತು ಮಾಡಿದ್ದೇವೆ. ನಿಗದಿತ ಕಂಪನಿಗಳ ಮೇಲೆ ಆರೋಪ ಬಂದರೆ ಕ್ರಮ ಕೈಗೊಳ್ಳುತ್ತೇವೆ. ವಿಮಾ ಕಂಪನಿಗಳ ಜೊತೆ ಪ್ರತಿ ತಿಂಗಳು ಸಭೆ ನಡೆಸಲಾಗುತ್ತಿದೆ.

ವಿಮಾ ಕಂಪನಿಗಳು ತಪ್ಪಿಸ್ಥರು ಆಗಿದ್ದರೆ ಕ್ರಮ‌ ಕೈಗೊಳ್ಳೋಣ ಎಂದು ಕೃಷಿ ಸಚಿವ ಬಿಸಿ ಪಾಟೀಲ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರೈತರ ಆತ್ಮಹತ್ಯೆ ವಿಚಾರದಲ್ಲಿ ಸಾಲದ ದಾಖಲೆಗಳು ಇದ್ದರೆ ಸಾಕು. ಬ್ಯಾಂಕ್ ನೋಟಿಸ್ ಕೊಡಲೇಬೇಕು ಅಂತಾ ಎನೂ ಇಲ್ಲ. ರೈತರು ಸಾಲ ಮಾಡಿದಕ್ಕೆ ದಾಖಲೆಗಳು ಇದ್ದರೆ ಸಾಕು. ಹಲವಾರು ಅಂಶಗಳು ಇವೆ. ಸಾಲದ ದಾಖಲೆಗಳು ಇದ್ದರೆ ಸಾಕು.ಕಮೀಟಿ ಪರಿಶೀಲನೆ ಮಾಡಿ ಪರಿಹಾರ ನೀಡಬೇಕು.ಪಹಣಿ ಇರಬೇಕು. ಪರಿಹಾರ ನೀಡಲು ದಾಖಲೆಗಳು ಬೇಕು ಎಂದರು.

ಬೆಳೆ ಪರಿಹಾರ ನೀಡಲು ನಷ್ಟದ ಬಗ್ಗೆ ಸರ್ವೆ ಕಾರ್ಯ ಮಾಡದ್ದೇವೆ. 30 ರಿಂದ ಪರಿಹಾರ ನೀಡಲು ಸಿಎಂ ಸೂಚಿಸಿದ್ದಾರೆ. ನವೆಂಬರ್ ತಿಂಗಳಿನಲ್ಲಿ 5 ಲಕ್ಷ ಹೆಕ್ಟೇರ್ ಗೂ ಹೆಚ್ಚು ಬೆಳೆ ನಾಶವಾಗಿದೆ. ಜುಲೈ ನಿಂದ ನವೆಂಬರ್ ವರೆಗೆ 11 ಲಕ್ಷ ಹೆಕ್ಟೇರ್ ಬೆಳೆ ನಾಶ ಆಗಿದೆ. ಅದೆಲ್ಲವೂ ಸರ್ವೆ ಮಾಡಲಾಗಿದೆ. ಪರಿಹಾರ ನೀಡಲು ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಅವರು ಹೇಳಿದರು.

Edited By : Manjunath H D
PublicNext

PublicNext

01/12/2021 01:30 pm

Cinque Terre

44.75 K

Cinque Terre

0