ಇದೇನಾಗುತ್ತಿದೆ ದೇಶದಲ್ಲಿ ರೈತರು ಕೇಳಿದ್ದೇನು ಸರ್ಕಾರದ ಧೋರಣೆ ಸರಿಯೇನು ಎನ್ನುವ ಪ್ರಶ್ನೇ ಎಲ್ಲರನ್ನು ಕಾಡುತ್ತಿದೆ.
ದೆಹಲಿಯಲ್ಲಿ ಪ್ರತಿಭಟನಾ ರೈತರು ಮತ್ತು ಪೊಲೀಸರ ನಡುವೆ ನಡೆಯುತ್ತಿರುವ ಕಾಳಗ ನಿಜಕ್ಕೂ ಭಯಂಕರವಾಗಿದೆ.
ಸಮಾಧಾನದಿಂದ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬೇಕಾದ ಸಮಸ್ಯೆ ಇಂದು ತಲೆಗಳೇ ಉರುಳುವ ಹಂತ ತಲುಪಿರುವುದು ಶಾಕ್ ನೀಡುವಂತ ಸಂಗತಿ.
ದೇಶದಲ್ಲಿ ಯಾವುದೇ ಒಂದು ಕಾನೂನನ್ನು ಜಾರಿ ಮಾಡಿದರೇ ಅದು ಜನರ ಏಳ್ಗೆಗಾಗಿ ಮಾಡಿರಲಾಗಿರುತ್ತದೆ. ಹಾಗೇಯೇ ಜಾರಿ ಮಾಡಲಾದ ಕಾನೂನುಗಳಿಗೆ ಸಾಕಷ್ಟು ವಿರೋಧ ವ್ಯಕ್ತವಾದರೆ ಅದನ್ನು ತಡೆಯುವುದು ಅಷ್ಟೇ ಮುಖ್ಯವಾಗಿರುತ್ತದೆ.
ಆದರೆ ಸದ್ಯ ದೇಶದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ನಿಲ್ಲುತ್ತಿಲ್ಲ. ಸರ್ಕಾರ ಜಾರಿ ಮಾಡಿರುವ ಮಸೂದೆಯನ್ನು ಹಿಂಪಡೆಯುತ್ತಿಲ್ಲ ಈಗಾಗಲೇ ಅನೇಕ ಬಾರಿ ಸರ್ಕಾರ ರೈತರೊಂದಿಗೆ ಮಾತುಕತೆ ನಡೆಸಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಪ್ರತಿಭಟನೆ ಕೈ ಬಿಡದ ರೈತರು ಇಂದು ಟ್ರ್ಯಾಕ್ಟರ್ ಪರೇಡ್ ನಡೆಸಿದ್ದಾರೆ. ಇದು ಅಕ್ಷರ ಸಹ ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿದೆ.
ಒಂದೆಡೆ ರಾಜಪಥದಲ್ಲಿ ಗಣರಾಜ್ಯೋತ್ಸವ ಪರೇಡ್ ನಡೆಯುತ್ತಿದ್ದರೆ. ಮತ್ತೊಂದೆಡೆ ದೆಹಲಿಯ ಸುತ್ತಲಿನ ಗಡಿಗಳಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿದೆ. ಟ್ರ್ಯಾಕ್ಟರ್ ಪರೇಡ್ ಗೆ ಆಗಮಿಸಿದ ರೈತರು, ದೆಹಲಿ ಪೊಲೀಸ್ ಕೇಂದ್ರ ಕಚೇರಿ ಎದುರುಗಡೆ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ಮುರಿದು ಧ್ವಂಸಗೊಳಿಸಿದ್ದಾರೆ.
ಉದ್ರಿಕ್ತ ಪ್ರತಿಭಟನಾಕಾರರು ಪೊಲೀಸರ ಮೇಲೆ ದಾಳಿ ನಡೆಸಿದರೆ, ಪೊಲೀಸರು ಅಶ್ರುವಾಯು,ಲಾಠಿ ಚಾರ್ಚ್ ಮಾಡಿದ್ದಾರೆ. ಒಟ್ಟಾರೆಯಲ್ಲಿ ರಾಷ್ಟ್ರ ರಾಜಧಾನಿ ರಣರಂಗವಾಗಿದೆ. ಇನ್ನಾದರು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವುದೇ ಕಾದುನೋಡಬೇಕಿದೆ.
PublicNext
26/01/2021 02:04 pm