ನವದೆಹಲಿ : ಕಳೆದ ಒಂದು ವಾರದಿಂದ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತರು ದೆಹಲಿ ಚಲೋ ಕೈಗೊಂಡಿದ್ದರು. ಇಂದು ಕೇಂದ್ರ ಸರ್ಕಾರವು ಸಂಧಾನಕ್ಕೆಂದು ಕರೆದಿತ್ತು.
ಸಭೆಯ ಸಂದರ್ಭದಲ್ಲಿ ಸರ್ಕಾರ ನೀಡಿದ ಊಟವನ್ನು ರೈತರು ತಿರಸ್ಕರಿಸಿದ ರೈತರು ನಮ್ಮ ಅನ್ನವನ್ನು ನಾವು ತಂದಿದ್ದೇವೆ, ನೀವು ಕೊಡುವ ಊಟ ಬೇಡ ಎಂದು ನಿರಾಕರಿಸಿ ಸ್ವಾಭಿಮಾನ ಮೆರೆದಿದ್ದಾರೆ.
ದೆಹಲಿಯ ವಿಜ್ಞಾನ ಭವನದಲ್ಲಿ ಸಭೆ ನಡೆಯುತ್ತಿದೆ.
ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಹೋರಾಟವು 7ನೇ ದಿನಕ್ಕೆ ಕಾಲಿಟ್ಟಿದೆ.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆಯೂ ಸಪ್ಟೆಂಬರ್ ನಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ವಿವಾದಾತ್ಮಕ ಮಸೂದೆಯನ್ನು ಅಂಗೀಕರಿಸಲಾಗಿತ್ತು.
ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ನವೆಂಬರ್.26ರಂದು ರೈತರು ದಿಲ್ಲಿ ಚಲೋ ಪ್ರತಿಭಟನೆ ಕೈಗೊಂಡರು.
ಕಳೆದ ಶುಕ್ರವಾರ ದೆಹಲಿ ಗಡಿ ಪ್ರದೇಶವನ್ನು ಪ್ರವೇಶಿಸಿದ ರೈತರು ಕೇಂದ್ರ ಸರ್ಕಾರಕ್ಕೆ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ರೈತರ ಪ್ರತಿಭಟನೆ ಸಂಬಂಧ ಇದುವರೆಗೂ ನಡೆಸಿದ ಮೂರು ಸಂಧಾನ ಸಭೆಗಳು ವಿಫಲವಾಗಿವೆ.
PublicNext
03/12/2020 04:59 pm