ಬೆಂಗಳೂರು : ಕಳೆದ ಏಳು ದಿನದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವ ವಾಹನ ಸವಾರರಿಂದ 3.63 ಕೋಟಿ ದಂಡ ಸಂಗ್ರಹ ಮಾಡಿದ್ದು, ಒಟ್ಟು 86,380 ಪ್ರಕರಣಗಳನ್ನು ನಗರ ಸಂಚಾರ ಪೊಲೀಸರು ದಾಖಲಿಸಿದ್ದಾರೆ.
ಹೆಲ್ಮೆಟ್ ರಹಿತ ಚಾಲನೆ ಮಾಡುತ್ತಿದ್ದ ಸವಾರರ ವಿರುದ್ಧ 28,201 ಪ್ರಕರಣ ದಾಖಲಿಸಿ 10 ಲಕ್ಷ ದಂಡ ವಸೂಲಿ ಮಾಡಿದ್ದಾರೆ.
ಇನ್ನು ಹಿಂಬದಿ ಸವಾರರ ವಿರುದ್ಧ 17,105 ಕೇಸ್ ದಾಖಲಿಸಿ 6.23 ಲಕ್ಷ ದಂಡ ವಸೂಲಿ ಮಾಡಿರುವುದಾಗಿ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಇನ್ನೂ ನೋ ಪಾರ್ಕಿಂಗ್ 3526 ಕೇಸ್(1.13 ಲಕ್ಷ ದಂಡ), ಸಿಗ್ನಲ್ ಜಪಿಂಗ್-10 ಸಾವಿರ ಕೇಸ್(3.73 ಲಕ್ಷ), ಮೊಬೈಲ್ ಬಳಕೆ-2448 ಕೇಸು(1.68 ಲಕ್ಷ), ಸೀಟ್ ಬೆಲ್ಪ್ ರಹಿತ-4827 ಪ್ರಕರಣ(2.29 ಲಕ್ಷ), ನೋ ಇಂಟ್ರಿ 3790 ಪ್ರಕರಣ(1.44 ಲಕ್ಷ) ದಂಡ ವಸೂಲಿ ಜೊತೆಗೆ
ಇತರ ಪ್ರಕರಣಗಳನ್ನೂ ದಾಖಲಿಸಿ ದಂಡ ವಿಧಿಸಿದ್ದಾರೆ.
PublicNext
28/10/2020 11:02 am