ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಸಾವಿರಾರು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ: ಲಕ್ಷ್ಮೇಶ್ವರದಲ್ಲಿ ದುರ್ಗಾದೌಡ್

ಗದಗ: ನೂರಾರು ಮಹಿಳೆಯರಿಂದ ಕುಂಭಹೊತ್ತು ಮೆರವಣಿಗೆ.ದಾರಿಯುದ್ದಕ್ಕೂ ಮಜಲು,ಡೊಳ್ಳು ವಾದನಗಳ ಸಂಭ್ರಮ.ಎಲ್ಲೆಲ್ಲೂ ವಿದ್ಯುತ್ ಅಲಂಕಾರದ ಜಗಮಗ.ಭಾರತಾಂಭೆ ವೇಷಭೂಷಣ ಧರಿಸಿದ ಮಕ್ಕಳ ಸೊಬಗು ನೋಡೋದೆ ಚಂದ.ಇದು ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದ ದುರ್ಗಾದೌಡ ಕಾರ್ಯಕ್ರಮದ ಜಲಕ್.ಕಳೆದ ಒಂಬತ್ತು ದಿನಗಳಿಂದ ಈ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ.ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಉಡಿ ತುಂಬಲಾಯಿತು.ಮಂಜಮ್ಮ ಜೋಗತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು.ಮುತ್ತೈದೆಯರೆಲ್ಲ ಸೇರಿ ಅವರಿಗೆ ಉಡಿ ತುಂಬಿದ್ರು.ತವರು ಮನೆ ಇಲ್ಲದ ಮುತ್ತೈದೆಯರಿಗೆ ಇಂತಹ ಕಾರ್ಯಕ್ರಮಗಳೇ ತವರು ಇದ್ದಂತೆ ಅಂತ ಜೋಗತಿ ಮಂಜಮ್ಮ ಸಂತಸ ವ್ಯಕ್ತಪಡಿಸಿದ್ರು.

ಆಧುನಿಕ ಯುಗದಲ್ಲಿ ಯುವಜನರು ಸಂಸ್ಕೃತಿ ಸಂಪ್ರದಾಯ ಆಚರಣೆ ಮರೆಯುತ್ತಿದ್ದಾರೆ.ಇಂತಹ ಕಾರ್ಯಕ್ರಮಗಳ ಮೂಲಕ ಯುವಜನತೆಯನ್ನು ಆಧ್ಯಾತ್ಮದೆಡೆ ಸೆಳೆಯಬೇಕು.ಅದಕ್ಕಾಗಿ ಯುವಕರ ಭಾಗವಹಿಸುವಿಕೆ ಕೆಲಸ ಮಾಡಲಾಗ್ತಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಗುರುನಾಥ ದಾನಪ್ಪನ್ನವರ ಹೇಳಿದ್ರು.

ರಾಜ್ಯಾದ್ಯಂತ ದುರ್ಗಾದೌಡ ಕಾರ್ಯಕ್ರಮ ಯಶಸ್ವಿಯಾಗಿವೆ.ಗದಗ ಜಿಲ್ಲೆಯಲ್ಲೂ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಆಚರಣೆಗಳು ಹೀಗೆ ಸದಾ ಇರಲಿ.ಹೆಚ್ಚೆಚ್ಚು ಜನರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿ ಎಂಬುದೇ ನಮ್ಮ ಆಶಯ.

Edited By : PublicNext Desk
Kshetra Samachara

Kshetra Samachara

05/10/2022 05:41 pm

Cinque Terre

8.34 K

Cinque Terre

0