ಗದಗ: ಮಲ್ಲಿಕಾರ್ಜುನ್ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಆಗ್ತಾರೆ ಅಂತಾ ಡಿಕೆಶಿ, ಸಿದ್ದರಾಮಯ್ಯ ಅವರಿಗೆ ಸಣ್ಣ ಭಯ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಗದಗ ಜಿಲ್ಲೆಯ ರೋಣ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆಗೆ ಆಗಮಿಸಿದ್ದ ಕಟೀಲ್, ಸಭೆಗೂ ಮುಂಚೆ ಮಾತನಾಡಿ, ಕಾಂಗ್ರೆಸ್‌ನಲ್ಲಿ ಮೂರನೇ ಶಕ್ತಿ ಕೇಂದ್ರ ಆರಂಭವಾಗುತ್ತಿದೆ ಆ ಭಯ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರನ್ನ ಕಾಡುತ್ತಿದೆ. ಸಿದ್ದರಾಮಯ್ಯ ಅವರು ಖರ್ಗೆಯವರಿಗೆ ದೋಖಾ ಹೊಡೆದವರು. ಸಿಎಂ ಸ್ಥಾನಕ್ಕೆ ಏರಲಿಕ್ಕೆ ಬಿಡದವರು. ದಲಿತ ಮುಖ್ಯಮಂತ್ರಿ ಆಗಲು ಅಡ್ಡಗಾಲು ಹಾಕಿದವರು. ಖರ್ಗೆ ಸೋಲಿಸಲು ಒಳ ಒಪ್ಪಂದ ಮಾಡಿಕೊಂಡು ರಾಜಕಾರಣ ಮಾಡಿದವರು ಈಗ ಅವರು ಅಧ್ಯಕ್ಷ ಆದ್ರೆ ಸೀಟ್ ಸಿಗೋದು ಕಷ್ಟ ಅಂತಾ ಭವಿಷ್ಯ ನುಡಿದ್ರು.
40 ಪರ್ಸೆಂಟ್ ಆರೋಪ ಆಧಾರ ರಹಿತ. ಸಿದ್ದರಾಮಯ್ಯ ಅವರು ನ್ಯಾಯವಾದಿಗಳಾಗಿದ್ದವರು. ಪುರಾವೆ ಇಲ್ಲದೇ ಆರೋಪ ಮಾಡಬಾರದು. ಸಿದ್ದರಾಮಯ್ಯ ಅವರ ಕಾಲದ ಅರ್ಕಾವತಿ ಪುರಾವೆಗಳು ನಮ್ಮ ಬಳಿ ಇವೆ. ಬೆಡ್ ಶೀಟ್ ಹಗರಣ, ಮೊಟ್ಟೆ ಹಗರಣಗಳ ದಖಲೆಗಳಿವೆ. ದಾಖಲೆ ಇಟ್ಟು ಮಾತಾಡ್ತೇವೆ. ಭ್ರಷ್ಟಾಚಾರದ ಮೂಲ ಕೇಂದ್ರ ಕಾಂಗ್ರೆಸ್. ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್. ಅವರ ಎಲ್ಲ ನಾಯಕರು ಬೇಲ್ ಇದ್ದಾರೆ. ಎಲ್ಲ ಜೈಲ್‌ಗೆ ಹೋಗುವವರು ಅಂತಾ ಡಿಕೆಶಿ, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
PublicNext
12/10/2022 05:26 pm