ಗದಗ : ಯಾವ ಇತಿಹಾಸದಿಂದ ಓದಿದ್ದಾರೊ ಗೊತ್ತಿಲ್ಲ.ಏಕ ವಚನದ ಬ್ರಹ್ಮ,ಭಂಡತನದ ಸರದಾರ್,ದೇಶ ಭಕ್ತರ ಬಗ್ಗೆ ನಯಾ ಪೈಸೆ ಗೊತ್ತಿಲ್ಲದ ವ್ಯಕ್ತಿ ಸಾವರ್ಕರ್ ಬಗ್ಗೆ ಮಾತನಾಡ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ ಆಕ್ರೋಶ ವ್ಯಕ್ತಪಡಿಸಿದರು.
ಗದಗನ ಕಸಾಪ ಸಭಾಂಗಣದಲ್ಲಿ ನಿನ್ನೆ ರಾತ್ರಿ ಪ್ರಜ್ಞಾ ಪ್ರವಾಹ ಬಯಲು, ಜಯೋಸ್ತುತೇ ಸಾವಿರದ ಸಾವರ್ಕರ್ ಕಾರ್ಯಕ್ರಮ ನಡೆಯಿತು.ವೇದಿಕೆ ಭಾಷಣದಲ್ಲಿ ಸಾವರ್ಕರ್ ವಿರೋಧಿಗಳ ಬಗ್ಗೆ ಆಕ್ರೋಶದ ಮಾತುಗಳನ್ನಾಡಿದ್ರು.
ಸಾವರ್ಕರ್ ಬಗ್ಗೆ ಮಾತನಾಡೊದಲ್ಲ,ಅವರ ಕಾಲ ಬುಡದಲ್ಲಿ ಕುಳಿತುಕೊಳ್ಳುವ ಯೋಗ್ಯತೆಯೂ ನಿಮಗಿಲ್ಲ.ರಾಜರಾಜೇಂದ್ರ ಚೋಳ ರಾಜ ಹಿಂದುವೇ ಅಲ್ಲ ಅಂತ ಕಮಲ್ ಹಾಸನ್ ಹೇಳದಿದ್ರೆ,ಉತ್ತರ ಭಾರತದಲ್ಲಿ ಚೋಳ ರಾಜರ ಬಗ್ಗೆ ಗೊತ್ತಾಗುತ್ತಿರಲಿಲ್ಲ. ಸಿದ್ದರಾಮಯ್ಯ,ಕಮಲ್ ಹಾಸನ್ ನಂತವರು ಸಾವರ್ಕರ್,ಹಿಂದುತ್ವದ ಬಗ್ಗೆ ದೇಶವೆ ತಿಳಿಯುವಂತೆ ಮಾಡ್ತಿದ್ದಾರೆ.ಒಂದು ರೀತಿ ಅವರಿಗೆ ಧನ್ಯವಾದಗಳನ್ನು ಹೇಳಬೇಕು ಅಂತ ವ್ಯಂಗ್ಯವಾಡಿದ್ರು.
ಸೇವೆ ಮಾಡಲು ರಾಜಕಾರಣಿಯೇ ಆಗಬೇಕೆಂದಿಲ್ಲ.ರಾಮಾಯಣದಲ್ಲಿ ಜಟಾಯು ತರ ಅನ್ಯಾಯದ ವಿರುದ್ಧ ಹೋರಾಡಬಹುದು.ರಾಮಾಯಣ,ರಾಮನಿಗೂ ಅದರ ಮೌಲ್ಯ ಎಂದಿಗೂ ಸವಕಲು ಆಗೋದಿಲ್ಲ.ಹಾಗೆಯೆ ವೀರ ಸಾವರ್ಕರ್ ಬರೆದ ಜಯೋಸ್ತುತೇ ಹಾಡು ಕೇಳಬೇಕು. ಮನದಲ್ಲಿ ದೇಶ ಭಕ್ತಿ ತನ್ನಿಂತಾನೆ ಮೂಡುತ್ತೆ.ಸಾವರ್ಕರ್ ಮಾತು ನಿಷ್ಠುರ, ಅದಕ್ಕೆ ಅವರು ತುಂಬಾ ಜನಪ್ರೀಯ ಎಂದು ಹೇಳಿದ್ರು.
ತಾಜಮಹಲ್ ನೋಡೋರು ಒಮ್ಮೆ ಸಾವರ್ಕರ್ ಇದ್ದ ಸೆಲ್ಯುಲಾರ್ ಜೈಲ್ ನೋಡಿ ಬನ್ನಿ.ನೇಣು ಹಾಕುವ ಸ್ಥಳದ ಎದುರಲ್ಲೆ ಸಾವರ್ಕರ್ ಸೆಲ್ ಇತ್ತು.ಬೇಕು ಅಂತಲೇ ಅದೇ ಸೆಲ್ ನಲ್ಲಿ ಇಟ್ಟಿದ್ದರು. ಯಾಕೆಂದರೆ ಪ್ರತಿಸಲ ನೇಣು ಹಾಕುವುದನ್ನ ನೋಡಿ ಸಾವರ್ಕರ್ ಕುಗ್ಗಲೆಂದು ಅಲ್ಲಿರಿಸಿದ್ರು. ಆದರೆ, ಸಾವರ್ಕರ್ ಎಂದಿಗೂ ಕುಗ್ಗಲಿಲ್ಲ, ಬಗ್ಗಲಿಲ್ಲ ಎಂದರು.
PublicNext
10/10/2022 11:59 am