ಗದಗ: ಅಭಿವೃದ್ಧಿ ಅನುದಾನ ವಿಚಾರದಲ್ಲಿ ಗಲಾಟೆಯಾಗಿ, ನೀರಿನ ಬಾಟಲ್, ಕುರ್ಚಿ ಎಸೆದು ಪೀಠೋಪಕರಣ ಧ್ವಂಸ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗದಗ ಜಿಲ್ಲೆ ಮುಂಡರಗಿ ಪುರಸಭೆಯಲ್ಲಿ ನಡೆದಿದೆ.
ಇಂದು ಮುಂಡರಗಿ ಪುರಸಭೆಯಲ್ಲಿ ಸಾಮಾನ್ಯ ಸಭೆ ಏರ್ಪಡಿಸಲಾಗಿತ್ತು. ಈ ವೇಳೆ ಅಭಿವೃದ್ಧಿ, ಅನುದಾನ ವಿಷಯ ಚರ್ಚೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ರಾಜಾಬಕ್ಷಿ ಬೆಟಗೇರಿ ಎಂಬ ಕಾಂಗ್ರೆಸ್ ಸದಸ್ಯ ನೀರಿನ ಬಾಟಲ್ ಹಾಗೂ ಕುರ್ಚಿ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಒಟ್ಟು 23 ಸದಸ್ಯರ ಪೈಕಿ ಮೊದಲು 9 ಜನ ಮಾತ್ರ ಸಭೆಗೆ ಹಾಜರಾಗಿದ್ದರು. ಕೆಲ ಸದಸ್ಯರು ತಡವಾಗಿ ಬಂದು ಮೀಟಿಂಗ್ ಮುಂದೂಡಿ, ಅನುದಾನ ಹಾಗೂ ಯಾವುದೇ ಬಿಲ್ ಪಾಸ್ ಮಾಡದಂತೆ ತಗಾದೆ ತೆಗೆದ್ರು. ಪದೆ ಪದೆ ಮೀಟಿಂಗ್ ಯಾಕೆ ಮುಂದೂಡಬೇಕು? ಸಭೆ ನಡೆಯಲಿ ಅಂತವಾದ ವಿವಾದ ನಡೆಯಿತು. ವಾರ್ಡ್‌ಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗ್ತಿದೆ ಅಂತ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಸದಸ್ಯರ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ನಂತರ ಪರಿಸ್ಥಿತಿ ತಿಳಿಗೊಳಿಸಿ ಆಡಳಿತ ಪಕ್ಷದ ಸದಸ್ಯರು ಗದ್ದಲದಲ್ಲೇ ಬಿಲ್‌ಪಾಸ್ ಮಾಡಿಕೊಂಡು ಸಭೆಯಿಂದ ಹೊರನಡೆದರು ಎಂದು ಹೇಳಲಾಗುತ್ತಿದೆ.
PublicNext
29/09/2022 10:57 pm