ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಹಾವಳಿ ಹನಮಂತ ದೇವಸ್ಥಾನ ಆವರಣದಲ್ಲಿ ಪ್ರತಿಷ್ಟಾಪನೆಯ ಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆಯಲ್ಲಿ ಹಿಂದೂ ಮಹಾಸಭಾ ಮಂಡಳಿಯವರು ಶಾಸಕ ಯತ್ನಾಳರಿಗೆ ರಾಮನ ಮೂರ್ತಿಕೊಟ್ಟು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ನಂತರ ಶಾಸಕ ಯತ್ನಾಳ ಗಣೇಶ ಮೂರ್ತಿಗೆ ಮಾಲಾರ್ಪಣೆ ಮಾಡಿ ಯುವಕರನ್ನು ಉದ್ದೇಶಿಸಿ ಮಾತನಾಡಿದರು. ಮೆರವಣಿಗೆಯೂ ಹಾವಳಿ ಹನಮಂತ ದೇವಸ್ಥಾನದಿಂದ ಪ್ರಾರಂಭವಾಗಿ ವಿದ್ಯಾರಣ್ಯ ವೃತ್ತ,ಪಂಪ ವೃತ್ತ,ಕೋರ್ಟ ಸರ್ಕಲ್ ಬಜಾರ ರೋಡ ಮುಖಾಂತರ ಸಾಗಿ ಮೂರ್ತಿಯನ್ನು ಇಟ್ಟಿಕೇರೆಯಲ್ಲಿ ವಿಸರ್ಜನೆ ಮಾಡಲಾಯಿತು.
PublicNext
19/09/2022 11:36 am