ಹಿಜಾಬ್ ವಿಚಾರವಾಗಿ ಹೈಕೋರ್ಟ್ ತೀರ್ಪು ನ್ಯಾಯಯುತವಾಗಿದೆ. ನಮ್ಮ ಧರ್ಮವನ್ನು ಮನೆಯಲ್ಲಿ ಪಾಲನೆ ಮಾಡೋದು ತಪ್ಪಿಲ್ಲ. ಆದರೆ ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ ಇರಬೇಕು ಎಂದು ನಟಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧಾ ಹೇಳಿದ್ದಾರೆ.
ಗದಗ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲ ಜಾತಿ ಧರ್ಮವನ್ನ ಸಮಾನವಾಗಿ ಕಾಣುವ ದೇಶ ಅಂದ್ರೆ ಅದು ಭಾರತ. ಶ್ರೀಮಂತ, ಬಡವ, ಜಾತಿ, ಮತಗಳಿಲ್ಲದೇ ಕುಳಿತು ಪಾಠ ಕಲಿಯುವ ದೇವಾಲಯ ಶಾಲೆ.ಆ ದೇವಾಲಯದಲ್ಲಿ ಧರ್ಮ ಪಾಲಿಸದೇ ಸಮನಾಗಿ ಕಾಣಲು ಯುನಿಫಾರ್ಮ್ ಬೇಕು ಎಂದು ತಾರಾ ಅಭಿಪ್ರಾಯಪಟ್ಟಿದ್ದಾರೆ.
Kshetra Samachara
15/03/2022 02:43 pm