ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ ತಾಲೂಕಿನಲ್ಲಿ ಪ್ರವಾಹದ ಆತಂಕ: ಜಿಲ್ಲಾಡಳಿತದಿಂದ ಎಚ್ಚರಿಕೆ

ಗದಗ: ರಾಜ್ಯದಲ್ಲಿ ಮಳೆ ನಿಂತರೂ ಪ್ರವಾಹದ ಭೀತಿ ಮಾತ್ರ ಇನ್ನೂ ನಿಂತಿಲ್ಲ. ಹೌದು ಗದಗ ಜಿಲ್ಲೆಯಲ್ಲಿ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮ ಗದಗ ಜಿಲ್ಲೆ ನರಗುಂದ ತಾಲೂಕಿನ ಗ್ರಾಮಗಳಿಗೆ ಜಲ ಕಂಟಕ ಎದುರಾಗಿದೆ.

ನರಗುಂದ ತಾಲೂಕಿನ ಲಖಮಾಪೂರ, ಕೊಣ್ಣೂರು, ಬೂದಿಹಾಳ ಗ್ರಾಮಗಳಿಗೆ ನೀರಿನ ಭೀತಿ ಶುರುವಾಗಿದೆ.ಈಗಾಗಲೇ ನವಿಲು ತೀರ್ಥ ಡ್ಯಾಂ ನಿಂದ 12,500 ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ.ಹೀಗಾಗಿ ಲಖಮಾಪೂರ ಗ್ರಾಮಕ್ಕೆ ನದಿ ನೀರು ಸುತ್ತುವರಿಯುತ್ತಿದೆ. ಅಲ್ಲದೇ ಅಪಾರ ಪ್ರಮಾಣದಲ್ಲಿ ಜಮೀನುಗಳಿಗೆ ಪ್ರವಾಹದ ನೀರು ನುಗ್ಗುತ್ತಿದೆ.ಇದರಿಂದಾಗಿ ಅನ್ನದಾತರು ಕಷ್ಟಪಟ್ಟು ಬೆಳೆದಿದ್ದ ಬೆಳೆಗಳು ಜಲಾವೃತವಾಗಿದೆ.

ಈಗಾಗಲೇ ಜಿಲ್ಲಾಡಳಿತ ನದಿ ತೀರದ ಗ್ರಾಮಸ್ಥರಿಗೆ ಎಚ್ಚರಿಕೆ ಸಹ ನೀಡಿದ್ದು ಗ್ರಾಮಗಳು ಮುಳಗಡೆಯಾದಲ್ಲಿ ಗಂಜಿ ಕೇಂದ್ರ ಸೇರಿದಂತೆ ಎಲ್ಲ ಸಿದ್ಧತೆಗಳನ್ನ ಮಾಡಿಕೊಳ್ತಿದೆ.

Edited By : Shivu K
Kshetra Samachara

Kshetra Samachara

14/09/2022 11:55 am

Cinque Terre

5.14 K

Cinque Terre

0