ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಕರ್ನಾಟಕದಲ್ಲಿ ಜೈ ಮಹಾರಾಷ್ಟ್ರ ಅಂದ ನಮ್ಮ ಕೆಎಸ್‌ಆರ್‌ಟಿಸಿ :ಕನ್ನಡದ ಟಿಕೆಟ್ ಗೂ ಗತಿ ಇಲ್ವೆ?

ಗದಗ: ಕೆಎಸ್ಆರ್ಟಿಸಿ ಇಲಾಖೆ ಸದಾ ಒಂದಲ್ಲ ಒಂದು ಸುದ್ದಿಗೆ ಗ್ರಾಸವಾಗಿರುತ್ತೆ. ಈಗ ಮತ್ತೊಂದು ಎಡವಟ್ಟಿನಿಂದ ಮತ್ತೆ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಅದೇನಪ್ಪ ಅಂದ್ರೆ ಕೆಎಸ್ಆರ್ಟಿಸಿ ಟಿಕೆಟ್ ನಲ್ಲಿ ಕರ್ನಾಟಕ ಸರಕಾರದ ಗಂಡಬೇರುಂಡ ಲಾಂಛನದ ಬದಲಾಗಿ ಮಹಾರಾಷ್ಟ್ರ ಸರಕಾರದ ಲಾಂಛನ ಪ್ರಿಂಟ್ ಇದೆ. ಮಹಾರಾಷ್ಟ್ರ ಸರಕಾರದ ಲಾಂಛನದ ಪ್ರಿಂಟ್ ಇರೋ ಟಿಕೆಟ್ ಗಳನ್ನ ಪ್ರಯಾಣಿಕರಿಗೆ ಕಂಡಕ್ಟರ್ ಗಳು ಹರಿದುಕೊಡ್ತಿದ್ದಾರೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ದೋಣಿ ಗ್ರಾಮದಿಂದ ಗದಗ ನಗರಕ್ಕೆ ಬರುವ ಸರಕಾರಿ ಬಸ್ ನಲ್ಲಿ ಈ ಟಿಕೆಟ್ ಹಂಚಿಕೆಯಾಗಿದೆ. ಇದೊಂದೇ ಮಾರ್ಗವಲ್ಲ ಬದಲಾಗಿ ಬಹುತೇಕ ನಗರಗಳಿಗೆ, ಹಳ್ಳಿಗಳಿಗೆ ತಾಲೂಕುಗಳಿಗೆ ಹೋಗುವ ಬಸ್ ಗಳಲ್ಲಿ ಇದೇ ಲಾಂಛನ ಇರುವ ಟಿಕೆಟ್ ನೀಡಲಾಗ್ತಿದೆ. ಮಹಾರಾಷ್ಟ್ರ ರಾಜ್ಯ ಪರಿವಾರನ್, ಜೈ ಮಹಾರಾಷ್ಟ್ರ ಅಕ್ಷರಗಳು ಮತ್ತು ಮಹಾರಾಷ್ಟ್ರ ಸರಕಾರದ ಲಾಂಛನ ಪ್ರಿಂಟ್ ಆಗಿರೋ ಟಿಕೆಟ್ ಗಳನ್ನ ಹಂಚುತ್ತಿದ್ದಾರೆ.

ಅಂದಹಾಗೇ ಕರ್ನಾಟಕ ಸರ್ಕಾರದ ಟಿಕೆಟ್ ನಲ್ಲಿ ರಾಜ್ಯ ಲಾಂಛನವಾಗಿರೋ ಗಂಡಬೇರುಂಡ ಲಾಂಛನ ಇರುತ್ತೆ. ಆದ್ರೆ ಗದಗದಲ್ಲಿ ಮಾತ್ರ ಸದ್ಯ ಕೆಲವು ಬಸ್ ಗಳಲ್ಲಿ ಮಹಾರಾಷ್ಟ್ರ ಟಿಕೆಟ್ ಹಂಚಿಕೆಯಾಗಿದೆ. ಇದರಿಂದ ರೊಚ್ಚಿಗೆದ್ದ ಕನ್ನಡಪರ ಸಂಘಟನೆಗಳು ದಿಢೀರ್ ಪ್ರತಿಭಟನೆಗಿಳಿದಿವೆ. ನಗರದ ಹಳೆ ಬಸ್ ನಿಲ್ದಾಣದಲ್ಲಿ ಎಡವಟ್ಟು ಮಾಡಿದ ನಾಡದ್ರೋಹಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಅಂತ ಒತ್ತಾಯಿಸಿದರು.

Edited By : Nagesh Gaonkar
PublicNext

PublicNext

05/10/2022 06:17 pm

Cinque Terre

31.76 K

Cinque Terre

1